ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 94 ರಷ್ಟು ಅಂಕ ಪಡೆದ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಸಾವಿತ್ರಿ ದೇಸಾಯಿ ಎಂಬ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡೋದಾಗಿ ಮಾಜಿ ಸಚಿವ ಸಂತೋಷ್ ಲಾಡ್ ಸಹಾಯ ಒಪ್ಪಿಕೊಂಡಿದ್ದಾರೆ.
ಬಡತನದಿಂದ ಬಳಲುತ್ತಿರುವ ಕುಟುಂಬಕ್ಕೆ ಮನೆ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕಾಲೇಜಿಗೆ ಪ್ರವೇಶಾತಿ ಪಡೆಯದಿರುವುದನ್ನು ತಿಳಿದ ಸಂತೋಷ ಲಾಡ್ ನಿನ್ನೆ ಸೋಮವಾರ ರಾತ್ರಿ ವಿದ್ಯಾರ್ಥಿನಿಯ ಕುಟುಂಬದವರನ್ನು ತಮ್ಮ ನಿವಾಸಕ್ಕೆ ಕರೆಯಿಸಿ ಕುಟುಂಬಕ್ಕೆ ತಿಂಗಳಿಗೆ ರೇಶನ್ ಕೊಡಿಸವುದಾಗಿ ಹೇಳಿದ್ದಾರೆ. ಹಾಗೂ ವಿದ್ಯಾರ್ಥಿನಿಯ ವಿಧ್ಯಾಭ್ಯಾಸ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ವರದಿ: ಉದಯ ಗೌಡರ
Kshetra Samachara
26/07/2022 02:46 pm