ಗುರುವಿಗೆ ಗೌರವ ನಮನ ಸಲ್ಲಿಸುವ ಸದುದ್ದೇಶದಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಆರ್.ಬಿ.ಪಾಟೀಲ ಮಹೇಶ್ ಆಕ್ಸ್‌ಫರ್ಡ್ ಪಿಯು ಕಾಲೇಜಿನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹೌದು..ನಗರದ ಕುಸುಗಲ್ ರಸ್ತೆಯಲ್ಲಿರುವ ಡಾ.ಆರ್.ಬಿ ಪಾಟೀಲ್ ಮಹೇಶ್ ಆಕ್ಸ್‌ಫರ್ಡ್ ಪಿಯು ಕಾಲೇಜಿನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮದ ಅಂಗವಾಗಿ ಕಲಿಸಿದ ಗುರುವಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ವಿಶೇಷವಾಗಿ ನಮನ ಸಲ್ಲಿಸಲಾಯಿತು.
ಇನ್ನೂ ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಶುಂಪಾಲ ರವಿರಾಜ್.ಎಸ್, ವಿದ್ಯಾರ್ಥಿಗಳು ಗುರಿ ಸಾಧಿಸಬೇಕಾದರೇ ಗುರುಗಳ ಮಾರ್ಗದರ್ಶನ ಅಗತ್ಯವಿದೆ. ಗುರು ಇಲ್ಲದೇ ಗುರಿ ಇಲ್ಲ ಎಂದರು. ಇದೇ ವೇಳೆ ಅವರು ಕಾಲೇಜಿನ ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲಾ ಶಿಕ್ಷಕ ವೃಂದಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮುತ್ತಪ್ಪ, ವಿರೇಶ್, ಅನಿಲ್ ಕದಂ, ಮಮತಾ ಕೆ, ಸೌಮ್ಯ ಶಾಂತಗಿರಿ, ಒಲಿವಿಯಾ ಫರ್ನಾಂಡೀಸ್, ರಾಜಣ್ಣ ಗುಡಿಮನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
15/07/2022 12:12 pm