ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವಿಧ್ಯಾರ್ಥಿಗಳ ಸಾಧನೆಗೆ ಸನ್ಮಾನ ಮಾಡಿದ ಯಲ್ಲಪ್ಪ ದಬಗೊಂದಿ

ವಿದ್ಯಾರ್ಥಿ ಜೀವನ ಬಿಳಿ ಹಾಳೆ ಇದ್ದಂತೆ. ನಾವು ರೂಪಿಸಿಕೊಳ್ಳುವ ರೀತಿಯಲ್ಲಿ ಜೀವನ ಸಾಗುತ್ತದೆ, ಉತ್ತಮ ಸಾಧನೆ ಮೂಲಕ ಹತ್ತ ತಂದೆ, ತಾಯಿಗಳಿಗೆ ಕೀರ್ತಿ ತರುವಂತರಾಗಿ ಎಂದು ರಾಜ್ಯ ಜನಪರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಡಾ.ಯಲ್ಲಪ್ಪ ದಬಗೊಂದಿ ಹೇಳಿದರು.

ಅವರು ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಸಭಾ ಭವನದಲ್ಲಿ ಹಮ್ಮಿಕೊಂಡ ರಾಜ್ಯ ಜನಪರ ಸಂರಕ್ಷಣಾ ವೇದಿಕೆ ಹಾಗೂ ಯಲ್ಲಪ್ಪ ದಬಗೊಂದಿ ಸಹೋದರರ ಬಳಗ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿ ಜೀನವದಲ್ಲಿ ದುಶ್ಚಚಟಗಳಿಗೆ ದಾಸರಾಗದೆ ಅಮೂಲ್ಯ ಜೀವನವನ್ನು ರೂಪಿಸಿಕೊಳ್ಳಿರಿ ಎಂದರು.

ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರು ಸಾನಿಧ್ಯವಹಿಸಿ ಮಕ್ಕಳಿಗೆ ಹಿತವಚನ ಬೋಧಿಸಿದರು, ಇಚ್ಚಂಗಿ ಆಧ್ಯಾತ್ಮಿಕ ಶ್ರೀಗಳಾದ ಶಶಿಕಾಂತ ಪಡಸಲಗಿ ಆಧ್ಯಾತ್ಮಿಕ ಬೋಧನೆ ಮಾಡಿದರು.

ಬಳಿಕ ಕುಂದಗೋಳ ತಾಲೂಕಿನ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಡಾ.ಎಂ. ಎಸ್.ಬಾರಕೇರ ನಿರೂಪಿಸಿದರು. ಪ್ರತಿಭಾ ಇಂಗೋಳ ಸ್ವಾಗತಿಸಿದರು. ಸಂತೋಷ ದೊಡ್ಡಮನಿ ವಂದಿಸಿದರು.

Edited By :
Kshetra Samachara

Kshetra Samachara

11/07/2022 03:53 pm

Cinque Terre

34.24 K

Cinque Terre

0

ಸಂಬಂಧಿತ ಸುದ್ದಿ