ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ಸ್ ವಿತರಣೆ

ಕಲಘಟಗಿ:ಪಟ್ಟಣದ ಯುವ ಮುಖಂಡ ಪಟ್ಟಣ‌ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ‌ ಮಾದರ ಪರಿಶಿಷ್ಟ ಜಾತಿ ಸಮುದಾಯದ ಬಡ ಮಕ್ಕಳಿಗೆ ಉಚಿತವಾಗಿ ವಿವಿಧ ಗ್ರಾಮಗಳಲ್ಲಿ ನೋಟ್ ಬುಕ್ಸ್ ಗಳನ್ನು ವಿತರಿಸಿದರು.

ತಾಲೂಕಿನ ಬೀರವಳ್ಳಿ,ಬಗಡಗೇರಿ,ಹುಲಗಿನಕಟ್ಟಿ ಗ್ರಾಮಗಳಲ್ಲಿ ನೋಟ್ ಬುಕ್ಸ್ ಗಳನ್ನು‌ ಉಚಿತವಾಗಿ ನೀಡಿದ ಬಸವರಾಜ ಮಾದರ‌ ಮಾತನಾಡಿ,ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಸಾವಿರಕ್ಕೂ ಹೆಚ್ಚು ನೋಟ್ ಬುಕ್ಸ್ ಗಳನ್ನು ಉಚಿತವಾಗಿ ವಿತರಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ಡಿಎಸ್ಎಸ್ ಸಂಘದ ಕಾರ್ಯದರ್ಶಿ ಯಲ್ಲಪ್ಪ ಮೇಲಿನಮನಿ,ಚಂದ್ರು ಹರಿಜನ,ಯಲ್ಲಪ್ಪ ಮಾದರ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

06/10/2020 11:26 am

Cinque Terre

15.23 K

Cinque Terre

2

ಸಂಬಂಧಿತ ಸುದ್ದಿ