ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಲಕೇರಿ ಸಂಗೀತ ವಿದ್ಯಾಲಯ ಸಂಸ್ಥೆಯ ಜೆಜೆ ಕಾಯ್ದೆಯ ನೋಂದಣಿ ರದ್ದು

ಧಾರವಾಡ: ಧಾರವಾಡದ ಕಲಕೇರಿ ಸಂಗೀತ ವಿದ್ಯಾಲಯ ಸಂಸ್ಥೆಯು ಜನೇವರಿ 4, 2016 ರಂದು ಜೆಜೆ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿದೆ. ಸಂಸ್ಥೆಯಲ್ಲಿ ವಸತಿಯುತ ವಿದ್ಯಾಭ್ಯಾಸಕ್ಕಾಗಿ ಮಾತ್ರ ಮಕ್ಕಳು ದಾಖಲಾಗುತ್ತಿದ್ದಾರೆ. ಸಂಸ್ಥೆಯಲ್ಲಿ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳಿಲ್ಲದಿರುವುದರಿಂದ ಸಂಸ್ಥೆಯನ್ನು ಜೆಜೆ ಕಾಯ್ದೆಯಿಂದ ಕೈಬಿಡುವಂತೆ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದು, ಅದರಂತೆ ಕಲಕೇರಿ ಸಂಗೀತ ವಿದ್ಯಾಲಯ ಸಂಸ್ಥೆಯನ್ನು ಜೆಜೆ ಕಾಯ್ದೆಯನ್ವಯ ನೋಂದಣಿಯನ್ನು ರದ್ದುಗೊಳಿಸಲಾಗಿದೆ.

ಮುಂಬರುವ ದಿನಗಳಲ್ಲಿ ಸಂಸ್ಥೆಯಲ್ಲಿ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳನ್ನು ದಾಖಲಿಸುವಂತಿಲ್ಲ. ಸಾರ್ವಜನಿಕರು ನೇರವಾಗಿ ಸಂಸ್ಥೆಗೆ ಪಾಲನೆ ಮತ್ತು ರಕ್ಷಣೆಗೆ ಒಳಪಡುವ ಮಕ್ಕಳನ್ನು ದಾಖಲಿಸಬಾರದು. ಒಂದು ವೇಳೆ ಸಂಸ್ಥೆಯು ಮಕ್ಕಳನ್ನು ದಾಖಲಿಸಿಕೊಂಡಲ್ಲಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

30/08/2022 10:51 pm

Cinque Terre

31.25 K

Cinque Terre

0

ಸಂಬಂಧಿತ ಸುದ್ದಿ