ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಹೊಸ ವೇದಿಕೆ

ಕುಂದಗೋಳ: ಮಕ್ಕಳ ಕಲೆ ಅವರಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಸರ್ಕಾರಿ ಶಾಲೆಗಳು ನಡೆಯುವ ಪ್ರತಿಭಾ ಕಾರಂಜಿಗಳೇ ವೇದಿಕೆ ಎಂದು ಹಿರಿಯ ಶಿಕ್ಷಕ ಟಿ.ಆರ್ ಹಿರೇಗೌಡ್ರ ಹೇಳಿದರು.

ಅವರು ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಟಿ.ಆರ್ ಹಿರೇಗೌಡ್ರ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ದೇಶಿಸಿ ಮಾತನಾಡಿ ಶಿಕ್ಷಕರ ಕನಸು ಮಕ್ಕಳು ವೇದಿಕೆ ಪ್ರತಿನಿಧಿಸಿ ಗೆಲ್ಲುವುದು ಅದು ಅಲ್ಲಿ ಜಯ ಕಂಡಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗುರು ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ.ವಿ ಕುಂದಗೋಳ, ಸಿಆರ್‌ಪಿ ಎಸ್.ಎಸ್ ನಾಗಶೆಟ್ಟಿ, ಎಸ್.ವಿ ವಿರಕ್ತಮಠ ಅವರನ್ನು ಸನ್ಮಾನ ಮಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ತೆರೆದ ವೇದಿಕೆ ಮೇಲೆ ಯಲಿವಾಳ, ಹೊಸಕಟ್ಟಿ, ರಾಮನಕೊಪ್ಪ, ಕುಬಿಹಾಳ, ಮತ್ತಿಗಟ್ಟಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆ ಕೈಗೊಂಡರು.

Edited By :
Kshetra Samachara

Kshetra Samachara

27/08/2022 01:57 pm

Cinque Terre

35 K

Cinque Terre

0

ಸಂಬಂಧಿತ ಸುದ್ದಿ