ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಮಾಜ ಕಲ್ಯಾಣ ಇಲಾಖೆ: ಹಾಸ್ಟೆಲ್ ಕೌನ್ಸಲಿಂಗ್ ಮೂಲಕ ಸ್ಥಳ ಹಂಚಿಕೆ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯು 2022-23 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಮೂಲಕ ಹಾಸ್ಟೆಲ್ ಸ್ಥಳ ಹಂಚಿಕೆ ಮಾಡಿ ಆದೇಶ ನೀಡಲಾಯಿತು‌.

ಸನ್ಮತಿ ಮಾರ್ಗದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಕೌನ್ಸಲಿಂಗ್‌ನಲ್ಲಿ ಜಂಟಿ ನಿರ್ದೇಶಕ ಡಾ. ಎನ್.ಆರ್.ಪುರುಷೋತ್ತಮ ವಿದ್ಯಾರ್ಥಿಗಳಿಗೆ ಸ್ಥಳ ನಿಯೋಜನೆ ಪತ್ರ ನೀಡಿ, ಶುಭ ಹಾರೈಸಿದರು.

ಪ್ರಸ್ತುತ ಪ್ರಥಮ ಪಿಯುಸಿ ಕೋರ್ಸ್ ವಿದ್ಯಾರ್ಥಿಗಳಿಗೆ ಮಾತ್ರ ಕೌನ್ಸಲಿಂಗ್ ನಡೆಸಿ, ಸ್ಥಳ ನಿಯೋಜಿಸಲಾಗಿದೆ. ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ಕೌನ್ಸಲಿಂಗ್ ನಡೆಸಲಾಗುವುದು. ಪ್ರಥಮ ಪಿಯುಸಿ ತರಗತಿಯ ಪರಿಶಿಷ್ಟ ಜಾತಿಯ 550, ಪರಿಶಿಷ್ಟ ಪಂಗಡದ 100 ಹಾಗೂ ಇತರೆ ಹಿಂದುಳಿದ ವರ್ಗಗಳ 108 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ದಾಖಲಾತಿ ಪತ್ರ ನೀಡಲಾಯಿತು.

Edited By : Manjunath H D
Kshetra Samachara

Kshetra Samachara

22/07/2022 04:47 pm

Cinque Terre

14.56 K

Cinque Terre

0

ಸಂಬಂಧಿತ ಸುದ್ದಿ