ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜೆ.ಎಸ್.ಎಸ್ ವಿದ್ಯಾಪೀಠದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ

ಕುಂದಗೋಳ : ಜೆ.ಎಸ್.ಎಸ್. ವಿದ್ಯಾಪೀಠ (ರಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಮಾಲಯ ಇವರ ಸಂಯುಕ್ತ ಆಶ್ರಯದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೆ.ಎಸ್.ಎಸ್‌ ವಿದ್ಯಾಪೀಠದ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಮಹಾಂತ ಮಹಾಸ್ವಾಮಿಗಳು, ಪರಮ ಪೂಜ್ಯ ಅಭಿನವ ಬಸವಣ್ಣಜ್ಜನವರು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟಕರಾಗಿ ಪಟ್ಟಣ ಪಂಚಾಯತದ ಅಧ್ಯಕ್ಷ ಪ್ರಕಾಶ ಕೋಕಾಟೆ, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಠಪತಿಯವರು, ವಿಜಯಕುಮಾರ ಎಲ್. ಡಿ.ದೊಡ್ಡಮನಿ, ಕಾಶಿನಾಥ ಹಡಗಲಿ, ಲಕ್ಷ್ಮಣ ಗೊಲ್ಲೂರ, ವಾಯ್.ಎಸ್. ಮೇಗುಂಡಿಯವರು ಉಪಸ್ಥಿತರಿದ್ದರು‌. ಬಸವರಾಜ ಗೊಲ್ಲರ ಹಾಗೂ ಪ್ರವೀಣ ಪಾಟೀಲ್ ಇವರಿಂದ ಯೋಗಾಭ್ಯಾಸ ಮಾಡಿಸಲಾಯಿತು.

ಯೋಗದ ಮಹತ್ವದ ಕುರಿತು ಪೂಜ್ಯರು ಉಭಯ ಶ್ರೀಗಳು ಆರ್ಶಿವಚನ ನೀಡಿದರು. ಕಾರ್ಯಕ್ರಮವನ್ನು ಜೆ.ಎಸ್.ಕೋಟಿ ನಿರೂಪಿಸಿದರು. ಎಮ್.ಸಿ. ಶಿಗ್ಲಿ ಸ್ವಾಗತಿಸಿದರು, ಎಸ್.ಸಿ. ಶಾನವಾಡ ವಂದಿಸಿದರು.

Edited By : PublicNext Desk
Kshetra Samachara

Kshetra Samachara

21/06/2022 02:47 pm

Cinque Terre

13.08 K

Cinque Terre

0

ಸಂಬಂಧಿತ ಸುದ್ದಿ