ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸೋರುತಿಹುದು ಅಂಗನವಾಡಿ ಮಳೆಯಾದರೆ ರಜೆ ಖಾತ್ರಿ!

ಕುಂದಗೋಳ : ಇಲ್ಲೊಂದು ಗ್ರಾಮದ ಮಕ್ಕಳ ತೊದಲು ನುಡಿ ಪಾಠಕ್ಕೆ ಆಶ್ರಯ ಆಗಬೇಕಿದ್ದ ಅಂಗನವಾಡಿ ಕಟ್ಟಡವೊಂದು ಇಂದೋ ನಾಳೆಯೋ ಬೀಳುವ ಹಂತದಲ್ಲಿದೆ.

ಹೌದು ! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ -28 ಕಟ್ಟಡ ದಿನೇ ದಿನೇ ಶಿಥಿಲಾವಸ್ಥೆ ತಲುಪುತ್ತಿದ್ದು, ಮಳೆ ಬಂದ್ರೇ ಸಾಕು ರಸ್ತೆ ನೀರು ಅಂಗನವಾಡಿಗೆ ಒಳಹೊಕ್ಕು ಸಂಪೂರ್ಣ ಭರ್ತಿಯಾಗುತ್ತದೆ.

ಸದ್ಯ ರಸ್ತೆಗಿಂತ ನಾಲ್ಕಿಂಚು ಎತ್ತರದ ಕಟ್ಟಡ ಹೊಂದದ ಅಂಗನವಾಡಿ ಸುತ್ತಲೂ ಗ್ರಾಮಸ್ಥರೇ ಸಿಮೆಂಟ್ ಹಾಕಿಸಿದ್ದು, ರಭಸದ ಮಳೆ ಸುರಿದರೆ ಅಂಗನವಾಡಿಗೆ ರಜೆ ಖಾತ್ರಿ ಎಂಬಂತಾಗಿದೆ.

ನಿತ್ಯ 30ಕ್ಕೂ ಹೆಚ್ಚು ಮಕ್ಕಳಿಗೆ ಬೋಧನೆ ಮಾಡಬೇಕಾದ ಗ್ರಾಮ ಪಂಚಾಯಿತಿ ಒಳಗೊಂಡ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಜಾಗ ಲಭ್ಯವಿದ್ದರೂ ನೂತನ ಕಟ್ಟಡದ ಭಾಗ್ಯ ಒದಗಿ ಬಂದಿಲ್ಲಾ. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

06/06/2022 10:13 pm

Cinque Terre

73.95 K

Cinque Terre

1

ಸಂಬಂಧಿತ ಸುದ್ದಿ