ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಬಿಎಸ್ ಇ ಯಲ್ಲಿ ಕಲಿತ ಮಕ್ಕಳಲ್ಲಿ ಆತಂಕ : ಇತ್ತ ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಸುತ್ತೋಲೆ

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಮಕ್ಕಳು ಉನ್ನತ ಮಟ್ಟದಲ್ಲೆ ಬೆಳೆಯಲೆಂದು ಪಾಲಕರು ಸಿಬಿಎಸ್ ಇ ಯಲ್ಲಿ ಕಲಿಸಿದರೆ ಇತ್ತ ಫಲಿತಾಂಶ ಬರದ ಕಾರಣ ಮಕ್ಕಳಲ್ಲಿ ಆತಂಕ ಮೂಡಿದೆ.

ಹೌದು ಒಂದು ಕಡೆ ಸಿಬಿಎಸ್ ಇ ಯಲ್ಲಿ ಕಲಿತ ಮಕ್ಕಳ ಫಲಿತಾಂಶ ಇನ್ನೂ ಬಂದಿಲ್ಲಾ. ಇನ್ನೊಂದೆಡೆ ರಾಜ್ಯ ಸರ್ಕಾರ ಕಾಲೇಜು ಇದೇ ಜೂನ್ 9 ರಿಂದ ಡಿಪ್ಲೋಮಾ, ವಿಜ್ಞಾನ ಕಾಲೇಜುಗಳನ್ನು ಆರಂಭ ಮಾಡಿ ಎಂದು ಆದೇಶವನ್ನು ಹೊರಡಿಸಿದೆ.

ಒಂದು ವೇಳೆ ಜೂನ್ 9 ರಿಂದ ಕಾಲೇಜುಗಳು ಆರಂಭಗೊಂಡರೆ ಸಿಬಿಎಸ್ ಇ ಯಲ್ಲಿ ಕಲಿತ ಮಕ್ಕಳು ಒಂದು ವರ್ಷ ಮನೆಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಆದ ಕಾರಣ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಮ್ಮ ಮಕ್ಕಳಿಗೆ ದಾರಿ ತೋರಬೇಕೆಂದು ಕೇಂದ್ರ ಸಂಘಟನೆಗಳು ಮತ್ತು ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರಗಳು ಶಿಕ್ಷಣ ಸಂಸ್ಥೆಗಳು ಜೊತೆಗೂಡಿ ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಭವಿಷ್ಯದ ನಾಯಕರನ್ನು ಸೃಷ್ಠಿಸಬೇಕೆ ಹೊರತು, ಸದ್ಯ ನಡೆದಿರುವ ಶೈಕ್ಷಣಿಕ ಭ್ರಷ್ಟ ವ್ಯವಸ್ಥೆಯಿಂದ ಮಹಾದುರಂತವಾಗಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಕ್ಕಳ ಭವಿಷ್ಯಕ್ಕೆ ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕಿದೆ.

Edited By :
Kshetra Samachara

Kshetra Samachara

03/06/2022 05:51 pm

Cinque Terre

30.55 K

Cinque Terre

1

ಸಂಬಂಧಿತ ಸುದ್ದಿ