ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿ ಮನೆಗೆ ಹೋಗಿ ಸಮವಸ್ತ್ರ ಧರಿಸಿ ಪರೀಕ್ಷೆಗೆ ವಾಪಸ್

ಇಂದು SSLC ಪರೀಕ್ಷಾ ಹಿನ್ನೆಲೆಯಲ್ಲಿ ಶಾಲಾ ಸಮವಸ್ತ್ರ ಧರಿಸದೆ ಹಿಜಾಬ್ ಅಷ್ಟೇ ಹಾಕಿಕೊಂಡು ಬಂದಿರುವುದರಿಂದ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಮನೆಗೆ ಕಳಿಸಿದ್ದಾರೆ.

ಹೌದು. ನಗರದ ಘಂಟಿಕೇರಿಯಲ್ಲಿರುವ ಶಾಂತಿನಿಕೇತನ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸರ್ದಾರ್ ಮೆಹಬೂಬ್ ಅಲಿಖಾನ್ ಶಾಲೆಯ ವಿದ್ಯಾರ್ಥಿನಿ ಸಮವಸ್ತ್ರ ಇಲ್ಲದೆ ಬರೀ ಬುರ್ಕಾ ಧರಿಸಿ ಪರೀಕ್ಷೆ ಬರಲು ಬಂದಿದ್ದಳು. ತಪಾಸಣೆ ವೇಳೆ ವಿದ್ಯಾರ್ಥಿನಿ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಮವಸ್ತ್ರ ಧರಿಸಿಕೊಂಡು ಬರುವಂತೆ ಅಧಿಕಾರಿಗಳು ಹೇಳಿ ಕಳಿಸಿದ್ದಾರೆ. ನಂತರ ವಿದ್ಯಾರ್ಥಿನಿ ಪಾಲಕರೊಂದಿಗೆ ಮನೆಗೆ ತೆರೆಳಿ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ವಾಪಸ್‌ ಆಗಿದ್ದಾಳೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/03/2022 02:11 pm

Cinque Terre

115.47 K

Cinque Terre

29

ಸಂಬಂಧಿತ ಸುದ್ದಿ