ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಇಂದಿನಿಂದ ಅಂಗನವಾಡಿಯಲ್ಲಿ ಚಿಣ್ಣರ ಕಲರವ

ಕುಂದಗೋಳ: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬಾಗಿಲು ಹಾಕಿದ್ದ ತೊದಲು ನುಡಿಯ ಪಾಠಶಾಲೆ ಅಂಗನವಾಡಿ, ಇಂದು ಸರ್ಕಾರದ ಆದೇಶದಂತೆ ಬಾಗಿಲು ತೆರೆದು ಚಿಣ್ಣರರನ್ನು ಸ್ವಾಗತಿಸಿಕೊಂಡಿದೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕೊರೊನಾ ವೈರಸ್ ಕಹಿ ದಿನಗಳನ್ನು ಎದುರಿಸುತ್ತಾ ಸದ್ಯ ಪುನಃ ಆರಂಭಗೊಂಡ ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಿದ ಅಂಗನವಾಡಿ ಕಾರ್ಯಕರ್ತೆಯರು ಗುಡೇನಕಟ್ಟಿ ಅಧ್ಯಕ್ಷರು ಮಕ್ಕಳಿಂದ "ಗುರು ವಿಷ್ಣು ಗುರುದೇವೋ" ಎಂಬ ಮಂತ್ರ ಪಠಣೆ ಹೇಳಿಸಿ ಪಾಠಕ್ಕೆ ಶುಭಾರಂಭ ಮಾಡಿದರು.

ಇನ್ನೂ ಮಕ್ಕಳು ಅಷ್ಟೇ ಲವಲವಿಕೆಯಿಂದ ಅಂಗನವಾಡಿಗೆ ಬಂದರೇ, ಪಾಲಕರು ಸಹ ಖುಷಿಯಿಂದ ಮಕ್ಕಳನ್ನು ಅಂಗನವಾಡಿಗೆ ತಲುಪಿಸಿ ಮರಳುವ ಸನ್ನಿವೇಶ ಕಂಡು ಬಂದವು. ಒಟ್ಟಾರೆ ಅಂಗನವಾಡಿಗಳು ಮಕ್ಕಳ ಅಭಿವೃದ್ಧಿ ನಿಟ್ಟಿನಲ್ಲಿ ಕೊರೊನಾ ಮೂರನೇ ಅಲೆ ಮುಂಜಾಗ್ರತೆ ನಡುವೆ ಬೋಧನಾ ಕಾರ್ಯ ಆರಂಭಿಸಿವೆ.

Edited By : Nagesh Gaonkar
Kshetra Samachara

Kshetra Samachara

14/02/2022 06:29 pm

Cinque Terre

40.88 K

Cinque Terre

1

ಸಂಬಂಧಿತ ಸುದ್ದಿ