ಕುಂದಗೋಳ : ಇಲ್ಲೋಂದು ಶಾಲೆ ಮಕ್ಕಳು ತಮ್ಮ ಶಾಲಾ ಶಿಕ್ಷಕರು ವರ್ಗಾವಣೆ ಬೇಡಾ ಆ ಶಿಕ್ಷಕರನ್ನು ಮರಳಿ ನಮ್ಮ ಶಾಲೆಗೆ ನೇಮಿಸಿ ಎಂದು ಒತ್ತಾಯಿಸಿ ಮಕ್ಕಳು ಇಂದು ಬೆಳಿಗ್ಗೆ ದಿಢೀರ್ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಹಿರೆನೇರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆ ಶಿಕ್ಷಕರಾದ ಪಿ.ಎಸ್.ಸಾಳುಂಕೆ ಹಾಗೂ ಸದಾನಂದ ಬಡಿಗೇರ್ ಬೇರೆಡೆ ವರ್ಗಾವಣೆ ಆಗಿದ್ದಾರೆ, ಈ ವಿಷಯ ತಿಳಿದ ವಿಧ್ಯಾರ್ಥಿ ವಿದ್ಯಾರ್ಥಿನಿಯರು ಧರಣಿ ಕೈಗೊಂಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ ಪೊಲೀಸರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ವಿವರಿಸಿ ವರ್ಗಾವಣೆಯಾದ ಶಿಕ್ಷಕರನ್ನು ಮರಳಿ ಹಿರೆನೇರ್ತಿ ಶಾಲೆಗೆ ನಿಯೋಜಿಸಿ ಎಂದು ಮಕ್ಕಳ ಪರ ಮನವಿ ಮಾಡಿದ ಬಳಿಕ ಮಕ್ಕಳ ಪ್ರತಿಭಟನೆ ತಾತ್ಕಾಲಿಕ ಸುಖಾಂತ್ಯ ಕಂಡಿದೆ.
Kshetra Samachara
29/12/2021 11:48 am