ಗ್ರಾಮೀಣ ಭಾಗದ ಅದೆಷ್ಟೋ ವಿದ್ಯಾರ್ಥಿನಿಯರು ಈ ವರ್ಷ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.90% ಸಾಧನೆ ಮಾಡಿದ್ದೂ ನಿಜಕ್ಕೂ ಪ್ರಶಂಸನೀಯ ಎಂದು ಮಹಿಳಾ ತಾಲೂಕು ಅಧ್ಯಕ್ಷ ದೃತಿ ಸಾಲ್ಮನಿ ಹೇಳಿದರು.
ಅವರು ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಹೈ ಸ್ಕೂಲ್‌ನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.90% ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವ ಧನ ನೀಡಿ ಮಾತನಾಡಿ ವಿದ್ಯಾರ್ಥಿನಿಯರ ಸಾಧನೆ ಖುಷಿ ತಂದಿದೆ. ಈ ರೀತಿ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಂದ ಹೆಚ್ಚಿನ ಪ್ರಮಾಣದಲ್ಲಿ ಮೂಡಿಬರಲಿ ಎಂದರು.
ಈ ಸಂದರ್ಭದಲ್ಲಿ ಗುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಶಾಲಾ ಎಸ್‌ಡಿಎಂಸಿ ಸದಸ್ಯರು ಗ್ರಾಮದ ಗುರು ಹಿರಿಯರು ಶಾಲಾ ಶಿಕ್ಷಕರು ಉಪಸ್ಥಿತರಿದ್ದು, ಮಕ್ಕಳ ಸಾಧನೆಯನ್ನು ಕಂಡು ಹೆಮ್ಮೆ ವ್ಯಕ್ತಪಡಿಸಿದರು. ಬಳಿಕ ಸನ್ಮಾನ ಸ್ವಿಕಾರ ಮಾಡಿದ ವಿದ್ಯಾರ್ಥಿನಿಯರು ತಮ್ಮ ತಮ್ಮ ಪರೀಕ್ಷಾ ಅನುಭವ ಹಂಚಿಕೊಂಡು ಸಾಧನೆ ಬೆಂಬಲ ನೀಡಿ ಶಿಕ್ಷಕರನ್ನು ಸ್ಮರಿಸಿದರು.
Kshetra Samachara
31/05/2022 01:33 pm