ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೈಸ್ಕೂಲ್ ಪಠ್ಯದಲ್ಲಿ ಸಿದ್ದಾರೂಢರ ಜಾತ್ರೆಯ ವೈಶಿಷ್ಟ್ಯ: ಖಚಿತ ಪಡಿಸದ ಶಿಕ್ಷಣ ಇಲಾಖೆ..!

ಉತ್ತರ ಕರ್ನಾಟಕ ಭಾಗದ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಸದ್ಗುರು ಸಿದ್ಧಾರೂಢರ ಜಾತ್ರೆಯ ಕುರಿತಾದ ವಿಷಯವೊಂದು ಪ್ರೌಢಶಾಲೆ ಪಠ್ಯದಲ್ಲಿ ಸಿದ್ದಾರೂಢರ ಜಾತ್ರೆ ಎಂಬ ಹೆಸರಿನಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಸರ್ಕಾರ ಮಾತ್ರ ಖಚಿತ ಪಡಿಸಿಲ್ಲ.

ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀಸಿದ್ದಾರೂಢರ ಜಾತ್ರೆಯ ಕುರಿತು ಸರ್ಕಾರ ಹೈಸ್ಕೂಲ್ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರ್ಪಡೆ ಮಾಡಿದೆಯೇ...? ಎಂಬ ಗೊಂದಲ ಸಾರ್ವಜನಿಕರಲ್ಲಿ ಉಂಟು ಮಾಡಿದೆ. ಇಂತಹದೊಂದು ಚರ್ಚೆ ಇದೀಗ ಹುಬ್ಬಳ್ಳಿ ನಗರದಲ್ಲಿ ಶುರುವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಸಿದ್ದಾರೂಢರ ಜಾತ್ರೆ ಎಂಬ ಹೆಸರಿನ ಪಾಠವೊಂದನ್ನು 8ನೇ ತರಗತಿಯ ಕನ್ನಡ ಭಾಷೆಯ ಪಠ್ಯದಲ್ಲಿ ಸೇರ್ಪಡೆ ಮಾಡಿರುವ ಮಾಹಿತಿಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಇದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಂಘ ಇನ್ನೂ ಖಚಿತ ಪಡಿಸಿಲ್ಲ. ವಾಟ್ಸ್ ಆ್ಯಪ್, ಫೇಸ್‌ಬುಕ್‌ಗಳಲ್ಲಿ ಇದು ವೈರಲ್ ಆಗಿದ್ದು, ಬೆಳಿಗ್ಗೆಯಿಂದಲೇ 'ಅಜ್ಜನ ಜಾತ್ರೆ' ಕುರಿತು ಪಠ್ಯದಲ್ಲಿ ಸೇರ್ಪಡೆಯಾಗಿದೆ ಎಂಬ ಚರ್ಚೆ ಮುನ್ನೆಲೆ ಬಂದಿದೆ. ಅಜ್ಜನ ತೇರಿನ ಚಿತ್ರವಿರುವ ಪಠ್ಯದ ಪೂರ್ಣ ಪಾಠವನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಇತಿಹಾಸವನ್ನು ಸಾರುವಂತೆ ವಿಷಯ ಪ್ರಸ್ತಾಪಿಸಲಾಗಿದೆ.

ಇನ್ನೂ ಹುಬ್ಬಳ್ಳಿ ತಾಲೂಕಿನ ಆದರಗುಂಚಿ ಗ್ರಾಮದ ಶಾಲೆಯೊಂದರ ಮಕ್ಕಳು, ತಮ್ಮ ಶಿಕ್ಷಕರೊಂದಿಗೆ ಸಿದ್ದಾರೂಢರ ಜಾತ್ರೆಗೆ ಆಗಮಿಸಿರುತ್ತಾರೆ. ಮಕ್ಕಳು ಜಾತ್ರೆಯ ಬಗ್ಗೆ ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಶಿಕ್ಷಕರು, ಮಕ್ಕಳಿಗೆ ಉತ್ತರಿಸುತ್ತಾರೆ. ತಮ್ಮ ಉತ್ತರದ ಮೂಲಕವೇ ಆರೂಢರ ಜನ್ಮ, ಹುಬ್ಬಳ್ಳಿಗೆ ಬಂದಿರುವುದು ಸೇರಿದಂತೆ ಮಠದ ಇತಿಹಾಸವನ್ನು ವಿವರಿಸುತ್ತಾರೆ. ಈ ಮೂಲಕ ಮಕ್ಕಳು ಮತ್ತು ಶಿಕ್ಷಕರ ಸಂವಾದದ ಮೂಲಕವೇ ಜಾತ್ರೆಯ ವಿಶೇಷತೆಯನ್ನು ಹೇಳುವ ಪಾಠ ಇದಾಗಿದೆ. ಆದ್ರೆ ಇನ್ನೂ ಶಾಲೆಗಳಿಗೆ ಪಠ್ಯ ಪ್ರಸ್ತಕಗಳು ಬಾರದ ಕಾರಣ ಇದು ಇದೆಯೋ ಅಥವಾ ನಕಲಿ ಸುದ್ದಿಯೋ ಗೊತ್ತಾಗಿಲ್ಲ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/05/2022 12:19 pm

Cinque Terre

204.26 K

Cinque Terre

28

ಸಂಬಂಧಿತ ಸುದ್ದಿ