ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯ್ನಾಡಿಗೆ ಮರಳಿದ ಚೈತ್ರಾ ಸಂಶಿ: ಮಗಳ ನೋಡಿ ಕಣ್ಣೀರಾದ ಪೋಷಕರು, ಅಪ್ಪಿ ಮುದ್ದಾಡಿದ ತಾಯಿ

ಹುಬ್ಬಳ್ಳಿ: ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಧಾರವಾಡ ಜಿಲ್ಲೆಯ‌ ಯರಗುಪ್ಪಿ ಗ್ರಾಮದ ಚೈತ್ರಾ ಸಂಶಿ ಇಂದು ಹುಬ್ಬಳ್ಳಿಗೆ ಆಗಮಿಸಿದರು. MBBS ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಚೈತ್ರಾ ಇಂದು ತವರಿಗೆ ಮರಳುತ್ತಿದಂತೆ ಪೋಷಕರ ಮುಖದಲ್ಲಿ ಮಂದಹಾಸ ಮೂಡಿತು. ಮಗಳ ಮುಖವನ್ನು ನೋಡಿದ ಪೋಷಕರ ಕಣ್ಣಂಚಲಿ ನೀರು ಜಿನುಗಿತು. ಮಗಳನ್ನು ತಾಯಿ ಸಿಎಂ ಬಸವರಾಜ್ ಬೊಮ್ಮಾಯಿ ಎದುರು ತಬ್ಬಿ ಮುದ್ದಾಡಿದರು.‌

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಚೈತ್ರಾ, ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ತಂಬಾ ಕಠಿಣ ಪರಿಸ್ಥಿತಿಯಿತ್ತು.ನಮ್ಮ ದೇಶದ ಎಂಬೆಸ್ಸಿ ಎಷ್ಟು ಸಹಾಯ ಮಾಡಬೇಕು ಅಷ್ಟು ಮಾಡಿದೆ. ಏಳೆಂಟು ದಿನಗಳ ಕಾಲ ಬಂಕರ್ ನಲ್ಲೆ ಕಾಲ‌ ಕಳೆದಿದ್ದೇವೆ. ದಿನಕ್ಕೆ ಒಂದೊತ್ತು ಊಟ ಮಾಡ್ತಿದ್ದೆವು ಎಂದು ಉಕ್ರೇನ್ ನಿಂದ ಬಂದ ವಿದ್ಯಾರ್ಥಿನಿ ಚೈತ್ರಾ ತಮ್ಮ ಮನದಾಳವನ್ನು ಹಂಚಿಕೊಂಡ

Edited By :
Kshetra Samachara

Kshetra Samachara

06/03/2022 11:36 am

Cinque Terre

57.82 K

Cinque Terre

5

ಸಂಬಂಧಿತ ಸುದ್ದಿ