ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾಲೇಜು ಬಾಗಿಲೂ ತೆರೆದ್ರೂ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಕುಂದಗೋಳ : ಸತತ ಆರು ತಿಂಗಳಿಗಿಂತ ಅಧಿಕ ಕಾಲ ಬೀಗ ಜಡಿದಿದ್ದ, ಶಾಲಾ ಕಾಲೇಜುಗಳು ಸದ್ಯ ಕದ ತೆರೆದು ವಿದ್ಯಾಭ್ಯಾಸ ನೀಡಲು ಮುಂದಾಗಿವೆ, ಆದ್ರೆ ಈ ವಿದ್ಯಾರ್ಥಿಗಳೇ ಕಾಲೇಜುಗಳತ್ತ ತಲೆ ಹಾಕದ ಪರಿಣಾಮ ಪಾಠ ಬೋಧನೆ ಕಲಿಕಾ ಪ್ರಕ್ರಿಯೆ ಮತ್ತಷ್ಟು ಕಗ್ಗಂಟಾಗುವ ಲಕ್ಷಣಗಳು ಎದ್ದು ತೋರುತ್ತಿವೆ.

ಸರ್ಕಾರ ಆದೇಶದಂತೆ ಬಾಗಿಲು ತೆರೆದ ಕಾಲೇಜುಗಳು ವಿದ್ಯಾರ್ಥಿಗಳಿಗೆ ಎರೆಡು ಷರತ್ತನ್ನು ವಿಧಿಸಿವೆ. ಮೊದಲನೆಯದು ಕಡ್ಡಾಯ ಕೋವಿಡ್ ಟೆಸ್ಟ್ ಎರಡನೇಯದು ಕಾಲೇಜಿಗೆ ಮಕ್ಕಳನ್ನು ಕಳುಹಿಸಲು ಪಾಲಕರ ಒಪ್ಪಿಗೆ ಪತ್ರ ಇವೆರಡಕ್ಕೂ ಮಕ್ಕಳು ತಯಾರಿದ್ರೂ, ಪಾಲಕರೂ ಒಪ್ಪಲು ತಯಾರಿಲ್ಲ ಈ ಕಾರಣ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಇಂದು ಕಾಲೇಜಿಗೆ ಬಂದಿದ್ದಾರೆ.

ಈಗಾಗಲೇ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳೇ ಸ್ವತಃ ಕಾಲೇಜು ತೆರೆದಿದೆ. ಬನ್ರಪ್ಪಾ ಎಂದ್ರೂ ಈ ವಿದ್ಯಾರ್ಥಿ ಬಳಗದ ಸ್ನೇಹಿತರ್ರೂ ಮಾತ್ರ ಕಾಲೇಜಿಗೆ ಗೆ ಬರ್ತಿಲ್ಲಾ

ಒಟ್ಟಾರೆ ಕೊರೊನಾ ಬಗ್ಗೆ ಪಾಲಕರಲ್ಲಿರುವ ಭಯ ಮಕ್ಕಳನ್ನ ಕಾಲೇಜಿಗೆ ಕಾಲಿಡದಂತೆ ಮಾಡಿದ್ರೇ, ಈ ಕೋವಿಡ್ ಟೆಸ್ಟ್ ಒಳಗಾದ ಮಕ್ಕಳು ವಾರ ಹದಿನೈದು ದಿನ ಕ್ವಾರೆಂಟೈನ್ ಅವಧಿ ಕಳೆಯುವ ದುಸ್ಥಿತಿ ಏರ್ಪಟ್ಟಿದೆ. ಸರ್ಕಾರ ಶೀಘ್ರ ರ್ರ್ಯಾಪಿಡ್ ಟೆಸ್ಟ್ ಗೆ ವಿದ್ಯಾರ್ಥಿಗಳನ್ನ ಒಳಪಡಿಸಿದ್ರೇ ಕಾಲೇಜಿಗೆ ಬರೋ ಮಕ್ಕಳ ಸಂಖ್ಯೆ ಏರುವ ಸಾಧ್ಯತೆಗಳಿವೆ.

Edited By : Manjunath H D
Kshetra Samachara

Kshetra Samachara

18/11/2020 05:38 pm

Cinque Terre

27.2 K

Cinque Terre

1

ಸಂಬಂಧಿತ ಸುದ್ದಿ