ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ :ಕಾಲೇಜು ಓಪನ್ ಆದ್ರು ಕಾಲೇಜಿಗೆ ಬಾರದ ವಿದ್ಯಾರ್ಥಿಗಳು

ಧಾರವಾಡ : ಕೊರೊನಾ ಮಹಾಮಾರಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಹತ್ತು ತಿಂಗಳುಗಳಿಂದ ಮುಚ್ಚಿದ ಕಾಲೇಜುಗಳು ಇಂದಿನಿಂದ ಆರಂಭಗೊಂಡಿವೆ.ಆದರೆ ಕಾಲೇಜು ಆರಂಭಕ್ಕೆ ಧಾರವಾಡದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಲೇಜುಗಳಿಗೆ ಇಂದಿನಿಂದ ತರಗತಿ ಆರಂಭಿಸಲಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ, ಆದರೆ ವಿದ್ಯಾಕಾಶಿ ಧಾರವಾಡದಲ್ಲಿ ಇದಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಕೆಸಿಡಿ ಕಾಲೇಜಿಗೆಈಗಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ತರಗತಿಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಕೊವೀಡ್ ಟೆಸ್ಟ್‌ ಮಾಡಿ. ಒಳಗೆ ಪ್ರವೇಶ ನೀಡಲು ಸಿದ್ದತೆ ಮಾಡಿಕೊಂಡಿದೆ.ಆದರೆ ಇಂದಿನಿಂದ ಆರಂಭವಾದ ಕಾಲೇಜುಗಳಿಗೆ ವಿದ್ಯಾಕಾಶಿ ಧಾರವಾಡದಲ್ಲಿ ಈಗ ನಿರಸ ಪ್ರತಿಕ್ರಿಯೆವ್ಯಕ್ತವಾಗುತ್ತಿದ್ದು,ಅಲ್ಲೊಬ್ಬರು ಇಲ್ಲೊಬ್ಬರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಇನ್ನೂ ಹಾಗೇ ಬಂದಂತಹ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡುವ ಮೂಲಕ ತರಗತಿ ಒಳಗೆ ಪ್ರವೇಶ ನೀಡಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

17/11/2020 03:09 pm

Cinque Terre

40.48 K

Cinque Terre

2

ಸಂಬಂಧಿತ ಸುದ್ದಿ