ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : 1-5 ನೆ ತರಗತಿ ಆರಂಭ ; ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪಡಕಿ

ಧಾರವಾಡ : ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಇಷ್ಟು ದಿನ ಮುಚ್ಚಿದ್ದ ಶಾಲಾ ಕಾಲೇಜುಗಳನ್ನ ಹಂತ ಹಂತವಾಗಿ ತೆರವುಗೊಳಿಸುತ್ತಿರುವ ಶಿಕ್ಷಣ ಇಲಾಖೆ ಇದೀಗ 1-5 ನೆ ತರಗತಿ ಗಳನ್ನು ಇಂದಿನಿಂದ ಪ್ರಾರಂಭ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ದುರ್ಗಾ ಕಾಲನಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡುವುದರ ಜೊತೆಗೆ ಸ್ಯಾನಿಟೈಸರ್ ನೀಡಿ ಬರಮಾಡಿಕೊಳ್ಳಲಾಯಿತು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪಡಕಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಧಾರವಾಡ ಶಹರ ವಲಯದಲ್ಲಿ 67 ಶಾಲೆಗಳು ಇಂದು ಪ್ರಾರಂಭವಾಗಿದ್ದು, ಹಾಜರಾತಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಪೋಷಕರು ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಮಕ್ಕಳಿಗೂ ಕೊರೋನ ಮಾರ್ಗಸೂಚಿ ಅನ್ವಯ ತರಗತಿ ನಡೆಸುವಂತೆ ಶಿಕ್ಷಕರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಸಮನ್ವಯ ಅಧಿಕಾರಿ ಮಂಜುನಾಥ್ ಅಡವೆ, ಎಸ್. ಡಿ. ಎಂ. ಸಿ. ಅಧ್ಯಕ್ಷ ಮಲಿಕ್ ಅಹ್ಮದ್ ಬಿಸ್ತಿ, ಮುಕ್ಯೋಪಾಧ್ಯಾಯ ಏನ್. ಬಿ. ದ್ಯಾಪುರ, ಕಾರ್ಪೂರೇಟರ್ ದೀಪ ನೀರಲಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

25/10/2021 03:46 pm

Cinque Terre

14.43 K

Cinque Terre

1

ಸಂಬಂಧಿತ ಸುದ್ದಿ