ಅಣ್ಣಿಗೇರಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಕಾರ್ಯಕಾರಿಣಿ ಸಮಿತಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನ ನಾಲ್ಕು ಶಿಕ್ಷಕರು ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಶಾಲಿಗಳಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಎಫ್.ಎ.ಕರಬುಡ್ಡಿ, ವಿ.ಎಮ್.ಹಿರೇಮಠ, ಎಸ್.ಎಮ್.ಹಿರೇಗೌಡರ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಪಂಕಜಾ .ವಿ.ಪುರೋಹಿತ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವ್ಹಿ.ಆಯ್.ನೇಕಾರ ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.
Kshetra Samachara
15/12/2020 10:49 pm