ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಪನ್ಮೂಲಗಳ ಕೊರತೆಯಿಂದ ಬಳಲಿವೆ ಪಂಚಾಯತಿ ಮಟ್ಟದ ಗ್ರಂಥಾಲಯಗಳು

ಕುಂದಗೋಳ : ಈ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಓದಿಗೆ ಅನುಕೂಲಕ್ಕಾಗಿ ನಿರ್ಮಿಸಿದ ಗ್ರಂಥಾಲಯಗಳ ಪಾಡು ಕೇಳೋರೆ ಇಲ್ಲದಂತಾಗಿದೆ. ಈ ಪರಿಣಾಮ ಓದುಗರಿಗೆ ಸಿಗಬೇಕಾದ ಸೌಲಭ್ಯ ಮರೆಯಾಗಿ ಹೋಗಿವೆ.

ಇದೋ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಟ್ಟಡದ ಮೇಲಿರುವ ಗ್ರಂಥಾಲಯದ ಪರಿಸ್ಥಿತಿ ನೋಡಿ. ಇಲ್ಲಿನ ಓದುಗರಿಗೆ ನಿತ್ಯ ದೊರಕ ಬೇಕಾದ ದಿನಪತ್ರಿಕೆಗಳು ಸತತ ಒಂಬತ್ತು ತಿಂಗಳಿಂದ ಲೈಬ್ರರಿ ಬಾಗಿಲನ್ನೇ ತಲುಪಿಲ್ಲ. ಇನ್ನು ಗ್ರಂಥಾಲಯದ ನಿರ್ವಹಣೆಗೆ ಸಿಬ್ಬಂದಿ ಇಲ್ಲದೆ ಗ್ರಂಥಾಲಯದ ಪರಿಸ್ಥಿತಿ ಗಬ್ಬೆದ್ದು ಹೋಗಿದೆ.

ಪಂಚಾಯ್ತಿ ಕಟ್ಟಡದ ಹಾಗೂ ಗ್ರಂಥಾಲಯದ ಕೆಳಗೆ ಕುಡುಕರ ಹಾವಳಿ ಹೆಚ್ಚಿದ್ದು, ಜೊತೆಗೆ ಪಂಚಾಯ್ತಿಗೆ ಕಾಮಗಾರಿಗೆ ಅಳವಡಿಸಲು ನೀಡಿದ ನಾಮಫಲಕಗಳನ್ನೇ ಅಧಿಕಾರಿಗಳು ನಡೆದಾಡಲು ನೆಲಹಾಸನ್ನಾಗಿ ಬಳಿಸಿದ್ದಾರೆ.

ಈ ಬಗ್ಗೆ ಗ್ರಂಥಪಾಲಕರನ್ನ ಕೇಳಿದ್ರೇ ಸರ್. ನಮಗೆ ಮೂರು ತಿಂಗಳಿಂದ ವೇತನ ಸಿಕ್ಕಿಲ್ಲಾ. ಈ ಹಿಂದೆ ನಾವೇ ಕೈಯಿಂದ ಹಣ ಹಾಕಿ ಪತ್ರಿಕೆ ತರಿಸಿದ್ದೇವು. ಸಧ್ಯದ ಪರಿಸ್ಥಿತಿ ನಮಗೂ ಗಂಭೀರವಾಗಿದೆ. ಪಂಚಾಯಿತಿ ಕಟ್ಟಡದ ನಿರ್ವಹಣೆ ಪಿಡಿಓ ವ್ಯಾಪ್ತಿಗೆ ಬರುತ್ತೆ, ಎನ್ನುತ್ತಾರೆ.

ಇನ್ನು ಗ್ರಾಮಸ್ಥರು ಹೇಳೋ ಪೈಕಿ, ಈ ಗ್ರಂಥಾಲಯದ ಸಮಯ ಕೆಟ್ಟು ನಿಂತ ಗಡಿಯಾರದಂತಾಗಿದ್ದು, ಪ್ರತಿದಿನ ಬಾಗಿಲು ತೆರೆಯುವ ನಿರ್ದಿಷ್ಟ ಸಮಯ ಮಾಯವಾಗಿ ಅತಿ ಹೆಚ್ಚಿನ ಸಮಯ ಬೀಗ ಜಡಿದಿರುತ್ತದೆ. ಈ ಬಗ್ಗೆ ಓದುಗರ ಅಭಿಪ್ರಾಯ ಕೇಳ್ಬಿಡಿ.

ಈ ಗ್ರಾಮ ಮಟ್ಟದ ಗ್ರಂಥಾಲಯಗಳು ಪಂಚಾಯ್ತಿ ಹಿಡಿತಕ್ಕೆ ಒಳಪಟ್ಟ ಕಾರಣ ಪಂಚಾಯ್ತಿ ಸಂಪನ್ಮೂಲಗಳಿಂದಲೇ ಗ್ರಂಥಪಾಲಕರಿಗೆ ಸಂಬಳ ಸಿಗಬೇಕು. ಆದ್ರೆ ಈ ಪಿಡಿಓಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಈ ಕಾರಣ ಓದುಗರಿಗೆ ವರದಾನವಾದ ಲೈಬ್ರರಿ ಬಾಗಿಲು ಮುಚ್ಚುವ ದಿನ ದೂರವಾಗಿಲ್ಲ.

Edited By : Nagesh Gaonkar
Kshetra Samachara

Kshetra Samachara

28/11/2020 04:06 pm

Cinque Terre

17.07 K

Cinque Terre

0

ಸಂಬಂಧಿತ ಸುದ್ದಿ