ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿಕ್ಷಣಕ್ಕೆ ಸುಸಜ್ಜೀತ ಶಾಲಾ ಕೊಠಡಿ ನಿರ್ಮಾಣ ನಮ್ಮ ಕರ್ತವ್ಯ

ಕುಂದಗೋಳ : ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2020-21ನೇ ಸಾಲಿನ ಆರ್.ಆಯ್.ಡಿ.ಎಫ್ ಯೋಜನೆಯ ಅಡಿಯಲ್ಲಿ 24 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಆ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಸುಸಜ್ಜೀತ ಶಾಲಾ ಕೊಠಡಿ ನಿರ್ಮಿಸುವುದು ನಮ್ಮ ಜವಾಬ್ದಾರಿ, ಆ ನಿಟ್ಟಿನಲ್ಲಿ ಇಂದು ಈ ಗ್ರಾಮದಲ್ಲಿ ಈ ಕಾಮಗಾರಿಗೆ ಪೂಜೆ ಸಲ್ಲಿಸಿದ್ದೇವೆ ಎಂದರು.

ಈ ವೇಳೆ ಗ್ರಾಮಸ್ಥರು ಶಾಸಕಿ ಕುಸುಮಾವತಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಹಾಗೂ ಹಿರಿಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/11/2020 02:48 pm

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ