ವರದಿ : ಪ್ರಶಾಂತ ಲೋಕಾಪುರ
ಧಾರವಾಡ : ಕೊರೊನಾ ಮಹಾಮಾರಿಯಿಂದ ಕಳೆದ 8 ತಿಂಗಳಿಂದ ಆರಂಭವಾಗದ ಪದವಿ ಕಾಲೇಜುಗಳು ಸರ್ಕಾರ ಕೋವಿಡ್ ಮುನ್ನೆಚ್ಚರಿಕೆವಹಿಸಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿ,ನಾಲ್ಕು ದಿನ ಕಳೆದರೂ ವಿದ್ಯಾರ್ಥಿಗಳ ಹಾಜರಾತಿ ಕುಸಿತಕಂಡಿದೆ.
ಧಾರವಾಡ ನಗರದಲ್ಲಿ ಪ್ರತಿಷ್ಠಿತ ಕರ್ನಾಟಕ ಕಾಲೇಜು,ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜು,ಮಹಾಂತ ಕಾಲೇಜು,ಬಹುತೇಕ ಕಾಲೇಜುಗಳಲ್ಲಿ ಬೆಳರಣಿಕೆಯಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.ಪ್ರತಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು.ವಿದ್ಯಾರ್ಥಿಗಳು ಬಾರದೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ ಕರಡೋನಿ ಹಾಗೂ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್.ಎಸ್. ಗಾಣಿಗೇರ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಪದವಿ ಕಾಲೇಜು ಪ್ರಾರಂಭವಾದರೂ ಕೂಡಾ ಕೇವಲ ಶೇ.10 ರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದು,ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿ ಹೊಸ ತಿರ್ಮಾಣ ತೆಗೆದುಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತೆ ವ್ಯವಸ್ಥೆ ಕಲ್ಪಿಸುತ್ತದೆ ಕಾದುನೋಡಬೇಕಾಗಿದೆ.
Kshetra Samachara
20/11/2020 11:52 am