ಕಲಘಟಗಿ : ತಾಲೂಕಿನ ದಾಸ್ತಿಕೊಪ್ಪದಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯವನ್ನು ಮಂಗಳವಾರ ತರಗತಿಗಳನ್ನು ನಡೆಸಲು ಪ್ರಾರಂಭಿಸಲಾಯಿತು, ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾತ್ರ ಕಾಲೇಜಿನತ್ತ ಸುಳಿಯದೇ ಕಾಲೇಜು ಬಿಕೋ ಎನ್ನುವಂತಾಗಿತ್ತು.
ಮಹಾವಿದ್ಯಾಲಯ ಪ್ರಾರಂಭವಾದರು ಸಹ ಮಹಾವಿದ್ಯಾಲಯದ ಹತ್ತಿರ ವಿದ್ಯಾರ್ಥಿಗಳು ಸುಳಿಯಲೇ ಇಲ್ಲ.
ಮಾರ್ಚ್ ತಿಂಗಳಿನಿಂದ ಲಾಕ್ ಡೌನ್ ಹಾಗೂ ಕೊರೊನಾದಿಂದ ಸುದೀರ್ಘ ಅವಧಿಯ ವರೆಗೆ ತರಗತಿಗಳು ನಡೆದಿರಲಿಲ್ಲ,ಕರೋನಾ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿಯಂತೆ ಕಾಲೇಜುಗಳನ್ನು ನಡೆಸಲು ಸರಕಾರ ಆದೇಶ ಮಾಡಿದೆ, ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾತ್ರ ಕಾಲೇಜಿನಿಂದ ದೂರ ಉಳಿದರು.ಮುಂದಿನ ದಿನಗಳಲ್ಲಿಯಾದರೂ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವರೆ ಕಾದು ನೋಡ ಬೇಕಿದೆ.
Kshetra Samachara
18/11/2020 10:15 am