ಹುಬ್ಬಳ್ಳಿ : ಲಿಂಗರಾಜನಗರದ ಯೋಗ ಕೇಂದ್ರದ ವತಿಯಿಂದ ನಗರದ ಉಣಕಲ್ ಕ್ರಾಸ್ ಬಳಿ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ, 12 ಯೋಗ ಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೇಯಸ್ ಮಂಡ್ಯಾಳ, ಸಾನ್ವಿ ಇಬ್ರಾಹಿಮಪುರ, ಸಂಸ್ಕೃತಿ ಅಂಬಿಗೇರ, ಕೃತಿಕಾ ಅಂಬಿಗರ, ಸಂಪತ್ ಹಡಗಲಿ, ತನಿಷ್ಕಾ ಲಿಂಬಿಕಾಯಿ, ಸಂದೀಪ ಬಿರಾದಾರ, ಪ್ರಶಸ್ತಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಇದೇ ವೇಳೆ ಯೋಗ ಗುರು ಕಾಶಪ್ಪ ಹಡಗಲಿ, ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಜಯರಾಮ್ ಕದಂ ಸನ್ಮಾನಿಸಲಾಯಿತು.
ಕೆಎಸ್ ಐಡಿಸಿ ನಿರ್ದೇಶಕ ರಾಜು ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಿಂಗರಾಜನಗರದ ಯೋಗ ಕೇಂದ್ರದ ನಿರ್ದೇಶಕ ಡಾ.ಎಂ. ಈಶ್ವರ ಆಗಮಿಸಿದ್ದರು.
Kshetra Samachara
05/11/2020 03:08 pm