ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ವಿದ್ಯಾನಗರದ ಶಿರೂರ್ ಪಾರ್ಕಿನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ತುಷಾರ್ ಗುಪ್ತಾ ಜೆಇಇ(ಐಐಟಿ) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ 1486 ರ್ಯಾಂಕ್ ಹಾಗೂ ರಾಜ್ಯಕ್ಕೆ 46 ನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.ಇನ್ನೂ ವಿದ್ಯಾರ್ಥಿಗೆ ಕಾಲೇಜಿನ ಮುಖ್ಯಸ್ಥರಾದ ಮಧುಸೂದನ್ ವಶಿಷ್ಟ, ಪ್ರಾಚಾರ್ಯರಾದ ವಿಶ್ವನಾಥ ಅಂಗಡಿ ಹಾಗೂ ನುಜಾಹತ್ ಪಾತೀಮ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
08/10/2020 05:18 pm