ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಟಿಇಟಿ, ಯುಪಿಎಸ್ ಸಿ ಪರೀಕ್ಷೆ ಬರೆದ 20806 ಆಕಾಂಕ್ಷಿಗಳು

ಹುಬಳ್ಳಿ : ಒಂದೇ ದಿನ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಹಾಗೂ ಕೇಂದ್ರ ಲೋಕ ಸೇವಾ ಆಯೋಗ (ಕೆಪಿ ಎಸ್ ಸಿ ) ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳು ಭಾನುವಾರ ಸುಸೂತ್ರವಾಗಿ ಶಾಂತಿಯುತವಾಗಿ ಜರುಗಿದವು.

ಬೆಳಗ್ಗೆ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 3148 ರಲ್ಲಿ 2471 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 8820ರಲ್ಲಿ 7469 ಶಿಕ್ಷಕ ಆಕಾಂಕ್ಷಿಗಳು ಪರೀಕ್ಷೆ ಎದುರಿಸಿದರು.

ಹುಬ್ಬಳ್ಳಿ ಯಲ್ಲಿ 19 ಹಾಗೂ ಧಾರವಾಡದಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಇನ್ನು ಧಾರವಾಡದ 35 ಪರೀಕ್ಷಾ ಕೇಂದ್ರಗಳಲ್ಲಿ 10686 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಬರೆದರು. ಒಟ್ಟು 11501 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಇದರಲ್ಲಿ ಬೆಳಗ್ಗೆ 5368 ಹಾಗೂ ಮಧ್ಯಾಹ್ನ 5318 ಪರೀಕ್ಷೆ ಎದುರಿಸಿದರು. ಎರಡೂ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳನ್ನು ಮಾರ್ಗಸೂಚಿ ಅನ್ವಯ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು.

ಇದರಲ್ಲಿ ಉಷ್ಣಾಂಶ ಕಂಡು ಅಭ್ಯರ್ಥಿಗಳಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡ್ರಿಸಿ ಪರೀಕ್ಷೆ ಬರೆಯಿಸಲಾಯಿತು. ಪ್ರತಿ ಕೇಂದ್ರದಲ್ಲಿ ಒಬ್ಬರು ಇಬ್ಬರು ಕಂಡು ಬಂದರು.

ಆದರೆ, ಅವರಿಗೆ ಕೋವಿಡ್ ಲಕ್ಷಣಗಳಿರಲಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಕೋವಿಡ್ ಸೋಂಕಿತರಾರು ಪರೀಕ್ಷೆಗೆ ಹಾಜರಾಗಿರಲಿಲ್ಲ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

05/10/2020 10:53 am

Cinque Terre

13.41 K

Cinque Terre

0

ಸಂಬಂಧಿತ ಸುದ್ದಿ