ನವಲಗುಂದ : ನವಲಗುಂದ ಪಟ್ಟಣದ ಹೊರ ವಲಯದ ಕೃಷಿ ಹೊಂಡದಲ್ಲಿ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ಶನಿವಾರ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಎಸ್... ಕಳೆದ ಎರಡು ದಿನಗಳ ಹಿಂದೆ ಕೃಷಿ ಹೊಂಡದಲ್ಲಿ ಬಿದ್ದು, 52 ವರ್ಷ ವಯಸ್ಸಿನ ಮಾಬುಸಾಬ್ ರಾಯಸಾಬ್ ಬಸರಕೋಡ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಈ ಹಿನ್ನೆಲೆ ಇಂದು ನವಲಗುಂದ ಪಟ್ಟಣದ ಬಸವೇಶ್ವರ ನಗರದ ಮಾಬುಸಾಬ್ ರಾಯಸಾಬ್ ಬಸರಕೋಡ ಅವರ ಮನೆಗೆ ತೆರಳಿದ ಎನ್ ಹೆಚ್ ಕೋನರಡ್ಡಿ ಮೃತನ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ನಂತರ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಿದರು.
Kshetra Samachara
24/09/2022 05:13 pm