ನವಲಗುಂದ : ಜೀವ ವಿಮಾ ಪಾಲಿಸಿದಾರರ ಮೇಲಿನ ಬೋನಸ್ ದರ ಹೆಚ್ಚಿಸುವ ಹಾಗೂ ಪಾಲಿಸಿದಾರರ ಸಾಲದ ಮೇಲೆ ಬಡ್ಡಿದರ ಮತ್ತು ಜಿಎಸ್‌ಟಿಯನ್ನು ಕಳಿತಗೊಳಿಸಬೇಕೆಂದು ಪ್ರತಿನಿಧಿಗಳಿಂದ ಒತ್ತಾಯಿಸಲಾಯಿತು.
ನವಲಗುಂದ ಪಟ್ಟಣದ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯದ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರತಿನಿಧಿಗಳ, ಗ್ರಾಚುಟಿ, ಗುಂಪು ವಿಮೆ, ಪಿಎಫ್, ಪಾಲುದಾರಿಕೆ ಪಿಂಚಣಿ ಸೇರಿದಂತೆ ಇನ್ನು ಹಲವಾರು ಬೇಡಿಕೆಗಳಿಗಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಆರ್ ಎಂ ಸರನಗೌಡರ, ಡಿ. ಜಿ ಹೆಬಸೂರ, ಎನ್ ಜಿ ಬಡಿಗೇರ, ಆರ್ ಪಿ ಹಿರೇಮಠ, ಎಂ ಎಸ್ ಹಿರೇಗೌಡರ, ಎಸ್ ಕೆ ಚಾಕಲಬಿ, ಜಿ ಬಿ ಸಾತಣ್ಣವರ, ಶಿವಕುಮಾರ ಕುಂಬಾರ, ಶಿವಾಜಿ ಕಿಳಿಕಾತರ, ರಾಮಕ್ಷಣ ಅಕ್ಕಿ, ಸುರೇಶ್ ಅಂಗಡಿ ಸೇರಿದಂತೆ ಹಲವಾರು ಇದ್ದರು.
Kshetra Samachara
16/09/2022 07:26 pm