ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜೆ.ಜೆ.ಎಂ ದುರುಪಯೋಗ ಆರೋಪ, ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಉಪವಾಸ ಸತ್ಯಾಗ್ರಹ

ನವಲಗುಂದ : ಭಾರತೀಯ ಜನತಾ ಪಾರ್ಟಿಯ ನವಲಗುಂದ ನಗರ ಘಟಕದ ಅಧ್ಯಕ್ಷರು ಹಾಗೂ ಆಶ್ರಯ ಸಮಿತಿ ಸದಸ್ಯರಾದ ಅಣ್ಣಪ್ಪ ಬಾಗಿ ಅವರ ಮಾಲೀಕತ್ವದ ಯಮನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರಗೊಪ್ಪ ಗ್ರಾಮದ ಸರ್ವೆ ನಂಬರ 13/1+2 ಹಾಗೂ 3 ನೇದ್ದರ 24+4 ಎಕರೆ ಇನ್ನೂ ಅಭಿವೃದ್ಧಿಪಡಿಸದ ಲೇಔಟನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸುವ ಮೂಲಕ ಭಾರತೀಯ ಜನತಾ ಪಾರ್ಟಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇವರನ್ನು ಪಕ್ಷದ ಎಲ್ಲ ಜವಾಬ್ದಾರಿಯಿಂದ ಕೈ ಬಿಡಬೇಕೆಂದು ಆಗ್ರಹಿಸಿ, ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಕರುನಾಡು ವಿಜಯ ಸೇನೆ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು.

ಬಾಗಿಯವರು ಅಷ್ಟೇ ಅಲ್ಲದೆ ಅಧಿಕಾರಿಗಳು ಲೇಔಟ ಮಾಲೀಕರೊಂದಿಗೆ ಶಾಮಿಲಾಗಿ ಅಕ್ರಮವೆಸಗಿದ್ದು, ಕಂಡು ಬಂದಿದ್ದರಿಂದ ಸಂಘಟನೆ ವತಿಯಿಂದ ರಸ್ತೆ ತಡೆ ನಡೆಸಿ, ತಹಶೀಲ್ದಾರರವರ ಮುಖಾಂತರ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡ ಇವರಿಗೆ ಮನವಿ ಸಲ್ಲಿಸಿದ್ದರೂ ಕೂಡಾ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ಅಕ್ರಮವಾಗಿ ಜಲಜೀವನ ಮಿಷನ್ ಯೋಜನೆಯಡಿ ಪೈಪ್ ಲೈನ್ ಅಳವಡಿಸಿದವರ ಕುರಿತಾಗಿ ಉನ್ನತ ಮಟ್ಟದ ತನಿಖಾ ಆಧಿಕಾರಿಗಳನ್ನು ನೇಮಿಸಿ, ಅಕ್ರಮವೆಸಗಿದವರ ಲೇಔಟ್ ಮಾಲೀಕರು ಹಾಗೂ ಇದಕ್ಕೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದರು.

ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಅಕ್ರಮವೆಸಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೇ ಇದ್ದ ಪಕ್ಷದಲ್ಲಿ ಇದೆ ತಿಂಗಳ 30ರಂದು ತಹಶೀಲ್ದಾರ ಕಚೇರಿಯ ಎದುರು ಕರುನಾಡು ವಿಜಯ ಸೇನೆ ಸಂಘಟನೆ ವತಿಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ತಾಲೂಕಾ ಅಧ್ಯಕ್ಷ ಅರುಣಕುಮಾರ್ ಸುಣಗಾರ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಮಾರ್ ಲಕ್ಕಮ್ಮನರ, ಶಿವು ಕಮ್ಮಾರ್, ಮುತ್ತು ದೊಡ್ಡಮನಿ, ಪ್ರಕಾಶ್ ಗೊಂದಳೆ ಇದ್ದರು.

Edited By : PublicNext Desk
Kshetra Samachara

Kshetra Samachara

22/08/2022 05:03 pm

Cinque Terre

14.04 K

Cinque Terre

1

ಸಂಬಂಧಿತ ಸುದ್ದಿ