1. ತುಂಡು ಜಾಗಕ್ಕಾಗಿ ಹಲ್ಲೆ
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ತುಂಡು ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ರಾಯನಗೌಡರಿಗೆ ಸಂಬಂಧಿಸಿದ ಜಾಗವನ್ನ ಬಸವರಾಜ್ ಮಡಿವಾಳರ ಅತಿಕ್ರಮಣ ಮಾಡಿದ್ದಾರೆ ಎನ್ನುವ ಆರೋಪ ರಾಯನಗೌಡ ಕುಟುಂಬಸ್ಥರು ಮಾಡುತ್ತಿದ್ದಾರೆ. ಈ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
https://publicnext.com/article/nid/Hubballi-Dharwad/Crime/node=631943
2. ಕ್ರಿಕೆಟ್ ಆಡುತ್ತಿದ್ದಾಗಲೇ ಯುವಕ ಸಾವು
ಕ್ರಿಕೆಟ್ ಆಟ ಆಡಿ ವಿಶ್ರಾಂತಿ ಪಡೆಯುವಾಗ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸಂಗೊಳ್ಳಿ ರಾಯಣ್ಣ ನಿವಾಸಿ ಮುನ್ನಾ ಇರ್ಕಲ್ ಸಾವನ್ನಪ್ಪಿದ ದುರ್ದೈವಿ.
https://publicnext.com/article/nid/Hubballi-Dharwad/Crime/node=631944
3. SSLC ಪರೀಕ್ಷಾ ಕೇಂದ್ರದ ಮೇಲೆ ಹೆಜ್ಜೇನು ದಾಳಿ
ಇನ್ನೇನು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಆರಂಭವಾಗಬೇಕಿತ್ತು. ಈ ವೇಳೆಗೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿಗಳು ಪರೀಕ್ಷೆ ಬಿಟ್ಟು ಪೋಷಕರ ಜೊತೆಗೆ ಓಡಿ ಪರೀಕ್ಷಾ ಕೇಂದ್ರದಿಂದ ಹೊರಟು ಹೋದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ.
https://publicnext.com/article/nid/Hubballi-Dharwad/Education/Accident/node=632489
4. ಯುವಕನಿಗೆ ದಂಡ ಹಾಕಿ ಚಳಿ ಬಿಡಿಸಿದ ಇನ್‌ಸ್ಪೆಕ್ಟರ್
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ರಾಂಗ್ ರೂಟ್‌ನಲ್ಲಿ ಬಂದಿದ್ದಲ್ಲದೇ, ಯದ್ವಾತದ್ವಾ ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ಸಂಚಾರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕಾಡದೇವರಮಠ ಅವರು ದಂಡ ಹಾಕಿ ಚಳಿ ಬಿಡಿಸಿದ್ದಾರೆ.
https://publicnext.com/article/nid/Hubballi-Dharwad/Law-and-Order/node=632220
5. ಮಹಿಳೆ ಆತ್ಮಹತ್ಯೆ
ಕುಂದಗೋಳ ತಾಲೂಕಿನ ಹಿರೇಹರುಣಿ ಗ್ರಾಮದ ಪೂಜಾ ಮಂಜುನಾಥ ಹುಬ್ಬಳ್ಳಿ ಎಂಬುವರು ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://publicnext.com/article/nid/Hubballi-Dharwad/Crime/node=632223
6. ಟಿಸಿ ಹುಟ್ಟಿಸಿದ ಭಯ
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹಾಕಲಾದ ಟಿಸಿ ಭಯ ಹುಟ್ಟಿಸಿದೆ. ಲೋಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳು ಸಂಪೂರ್ಣ ಬಾಗಿ ನಿಂತಿವೆ. ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಕಂಬಗಳು ಬಿದ್ದರೆ ಏನು ಗತಿ ಎಂದು ಈ ರೈತ ಆತಂಕ ಎದುರಿಸುತ್ತಿದ್ದಾರೆ.
https://publicnext.com/article/nid/Hubballi-Dharwad/Infrastructure/Agriculture/node=632211
7. ಮೂರ್ತಿ ವಿಚಾರಕ್ಕೆ ವಾಗ್ವಾದ
ಧಾರವಾಡದ ಶ್ರೀನಗರ ವೃತ್ತದಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಹು-ಧಾ ನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮೂರ್ತಿ ತೆರುವು ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದ್ದಾರೆ.
https://publicnext.com/article/nid/Hubballi-Dharwad/Politics/Government/node=631902
8. ಸೌಹಾರ್ದತೆಗೆ ಸಾಕ್ಷಿಯಾದ ಅಡ್ಡಪಲ್ಲಕ್ಕಿ
ಹಳೇ ಹುಬ್ಬಳ್ಳಿಯ ಹಿರೇಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದವನ್ನು ಮರೆತು ಉತ್ಸವದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸೌಹಾರ್ದತೆಗೆ ಸಾಕ್ಷಿಯಾಗಿದೆ.
https://publicnext.com/article/nid/Hubballi-Dharwad/Religion/node=632445
9. ಆಟೋ ಚಾಲಕರ ಆಕ್ರೋಶ
ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಇತರ ಬೆಲೆ ಏರಿಕೆ ಖಂಡಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
https://publicnext.com/article/nid/Hubballi-Dharwad/Politics/Infrastructure/node=632365
10. 'ಒಂದು ತಿಂಗಳಾದರೂ ಶಾಂತಿಯಿಂದ ಇರೋಣ'
ಮುಸಲ್ಮಾನರು ಪವಿತ್ರ ರಂಜಾನ್ ಹಬ್ಬ ಹಾಗೂ ಹಿಂದೂಗಳು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಾದರೂ ಎಲ್ಲರೂ ಶಾಂತಿಯಿಂದ ಇರೋಣ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
https://publicnext.com/article/nid/Hubballi-Dharwad/Politics/News/Public-News/Religion/node=632487
Kshetra Samachara
04/04/2022 10:23 pm