1. 'ಪ್ರೀತ್ಸೆ ಪ್ರೀತ್ಸೆ'- ಶಿಕ್ಷಕಿಗೆ ಕಿರುಕುಳ
ಶಿಕ್ಷಕಿಯನ್ನು ನಡು ರಸ್ತೆಯಲ್ಲಿ ತಡೆದು ಪ್ರೀತಿಸುವಂತೆ ಪೀಡಿಸುತ್ತ ಕೈಹಿಡಿದು ಎಳೆದಾಡಿದ ಯುವಕನನ್ನು ನವನಗರ ಠಾಣೆ ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಆರೋಪಿ ಮಹ್ಮದ್ ಯಾಸೀನ್ ಖಾಜಾಮೈನುದ್ದೀನ್ ಮುಲ್ಲಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
https://publicnext.com/article/nid/Hubballi-Dharwad/News/node=630286
2. ಅಕ್ರಮವಾಗಿ ಮಣ್ಣು ಗಣಿಗಾರಿಕೆ?
ನವಲಗುಂದ ಪಟ್ಟಣದ ಮಂಜುನಾಥ ನಗರದಲ್ಲಿನ ಹಿರೇಮಠಕ್ಕೆ ಸೇರಿದ ಸ್ಥಳದಲ್ಲಿನ ಗುಡ್ಡದ ಮಣ್ಣನ್ನು ಕಳೆದ ಮೂರು ದಿನಗಳಿಂದ ಟಿಪ್ಪರ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
https://publicnext.com/article/nid/Hubballi-Dharwad/Crime/node=630631
3. ವಾಯು ಮಾಲಿನ್ಯದಲ್ಲಿ ಹುಬ್ಬಳ್ಳಿಯೇ ಫಸ್ಟ್
ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದೆ. ವಿಪರ್ಯಾಸವೆಂದರೆ ಈ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವನ್ನು ಪಡೆದಿದೆ. ಯಾದಗಿರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
https://publicnext.com/article/nid/Hubballi-Dharwad/Infrastructure/Government/node=630349
4. 'ಹುಚ್ಚಾಸ್ಪತ್ರೆಗೆ ಸೇರಿಸಿ'
ಕರ್ನಾಟಕದಲ್ಲಿ ಕೆಲವು ಸಂಘಟನೆಗಳು, ಸ್ವಾಮಿಗಳು ಜನರಲ್ಲಿ ಹೋಗಿ ನೀವು ಹಲಾಲ್ ತಿನ್ನಬೇಡಿ ಎಂದು ಹೇಳುತ್ತಿರುವುದು ತಪ್ಪು. ನಾವು ಏನಾದರೂ ತಿನ್ನುತ್ತೇವೆ, ಅದು ಇವರಿಗ್ಯಾಕೆ ಎಂದು ಕಾಂಗ್ರೆಸ್ ಮುಖಂಡ ಅಶ್ಫಾಕ್ ಕುಮಟಾಕರ್ ಪ್ರಶ್ನಿಸಿ ಕಾಳಿ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://publicnext.com/article/nid/Hubballi-Dharwad/Religion/node=630478
5. ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ
ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಒಂದೇ ಸೂರಿನಡಿ ದೊರಕಿಸುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಜಾರಿಗೊಳಿಸಿದೆ. ಈ ನೂತನ ಆನ್‌ಲೈನ್ ವ್ಯವಸ್ಥೆಯಡಿ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವ 269 ಕಾಲೇಜುಗಳ 42 ಸಾವಿರ ವಿದ್ಯಾರ್ಥಿಗಳು ನೇರ ಸೌಲಭ್ಯ ಪಡೆಯಲಾರಂಭಿಸಿದ್ದಾರೆ.
6. ಪಾಲಿಕೆ ಜಾಗವನ್ನೇ ಬಾಡಿಗೆ ಕೊಟ್ಟ ಭೂಪರು
ಹುಬ್ಬಳ್ಳಿಯ ನವನಗರದ ಪೊಲೀಸ್ ಠಾಣೆ ಹಿಂಬದಿಯ ಪಾಲಿಕೆ ನಿವೇಶನ ಅತಿಕ್ರಮಣ ತೆರವು ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ವಿಚಿತ್ರವೆಂದರೆ ವ್ಯಾಪಾರ ನಡೆಸಲು ಅನುಮತಿ ಪಡೆದಿದ್ದ ಕೇವಲ ಐವರು, ಅನಧಿಕೃತವಾಗಿ 20ಕ್ಕೂ ಹೆಚ್ಚು ಅಂಗಡಿಗಳಿಗೆ ಬಾಡಿಗೆ ನೀಡಿದ್ದರು.
https://publicnext.com/article/nid/Hubballi-Dharwad/Infrastructure/node=630208
7. 'ಬಿಜೆಪಿ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿಲ್ಲ'
ನವಲಗುಂದ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
https://publicnext.com/article/nid/Hubballi-Dharwad/Politics/node=630418
8. ಆನ್‌ಲೈನ್ ದೋಖಾ
ಆನ್‌ಲೈನ್‌ನಲ್ಲಿ ಉದ್ಯೋಗ ಹುಡಕಲು ಹೋಗಿ ಹುಬ್ಬಳ್ಳಿಯ ನವನಗರ ಪಂಚಾಕ್ಷರಿ ನಗರದ ನಿವಾಸಿ ಮನಪ್ರೀತ ರೆಡ್ಡಿ ಎಂಬುವರು ಅಪರಿಚಿತ ಮಹಿಳೆಯಿಂದ 1 ಲಕ್ಷ 23 ಸಾವಿರದ 878 ರೂ. ವಂಚನೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
https://publicnext.com/article/nid/Hubballi-Dharwad/Crime/node=630179
9. IPL ಕ್ರಿಕೆಟ್ ಬೆಟ್ಟಿಂಗ್- ಮೂವರ ಅರೆಸ್ಟ್
ಹುಬ್ಬಳ್ಳಿಯ ಕ್ರಿಶ್ಚಿಯನ್ ಕಾಲೋನಿಯ ದೊಡ್ಡಮನಿ ಮೈದಾನದಲ್ಲಿ ಐಪಿಎಲ್ ಕ್ರಿಕೆಟ್ ಬೆಟಿಂಗ್ ಆಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಡಿಗೇರಿ ಪೊಲೀಸರು ಬಂಧಿಸಿ, ಅವರಿಂದ 18,000 ರೂ. ಹಾಗೂ 10 ಸಾವಿರ ರೂ. ಮೌಲ್ಯದ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
https://publicnext.com/article/nid/Hubballi-Dharwad/Crime/node=630176
10. ಯುಗಾದಿ ಸಂಭ್ರಮ; ಮಾರುಕಟ್ಟೆಗೆ ಜನ ಲಗ್ಗೆ
ಕೊರೊನಾ ಹಾವಳಿ ನಂತರ ಇದೇ ಮೊದಲ ಬಾರಿಗೆ ಜನರು ಯುಗಾದಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಹಬ್ಬದ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
https://publicnext.com/article/nid/Hubballi-Dharwad/Business/Religion/node=630411
Kshetra Samachara
01/04/2022 10:06 pm