ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡ daily roundup 28-03-2022

1. ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಕಲಘಟಗಿ ತಾಲೂಕು ದುಮ್ಮವಾಡ ಗ್ರಾಮದಲ್ಲಿ ಸಾಲಬಾಧೆ ತಾಳದೆ ದ್ಯಾಮಣ್ಣ ಸತ್ತೂರ ಎಂಬ ರೈತ ಮೃತಪಟ್ಟಿದ್ದಾನೆ.

ಕೃಷಿಸಾಲ ತೀರಿಸಲಾಗದೇ ರೈತ ಕುಣಿಕೆಗೆ ಕೊರಳೊಡ್ಡಿದ್ದು, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://publicnext.com/article/nid/Hubballi-Dharwad/Crime/Agriculture/node=627626

2. ಸಿಡಿಲು ಬಡಿದು ಕುರಿಗಾಹಿ ಸಾವು

ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಹೊರವಲಯದಲ್ಲಿಂದು ಸಿಡಿಲು ಬಡಿದು 19 ವರ್ಷದ ದೇವೇಂದ್ರ ಎಂಬ ಕುರಿಗಾಯಿ ಸಾವು.

ಕುರಿಗಾಯಿ ಕಳೆದುಕೊಂಡ ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ.

https://publicnext.com/article/nid/Hubballi-Dharwad/Nature/Accident/node=627823

3.ರೇಣುಕಾಚಾರ್ಯ ಜಯಂತಿಗೆ 2 ಲಕ್ಷ ದೇಣಿ

ಅಣ್ಣಿಗೇರಿಯಲ್ಲಿ ಜಂಗಮ ಶ್ರೇಯೋಭಿವೃದ್ಧಿ ಸಂಘ ಅಣ್ಣಿಗೇರಿ ತಾಲೂಕು ಘಟಕದ ವತಿಯಿಂದ ರೇಣುಕಾಚಾರ್ಯ ಜಯಂತಿ ಆಚರಣೆ. ತಂದೆ ತಾಯಿ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ.

https://publicnext.com/article/nid/Hubballi-Dharwad/Politics/Religion/node=627731

4. ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ

ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಮೂಲಕ ಕಾಮಗಾರಿಗೆ ಚಾಲನೆ ಕೊಟ್ಟ ಸಚಿವ ಶಂಕರ ಪಾಟೀಲ ಮುನೇನಕೊಪ್ಪ.

https://publicnext.com/article/nid/Hubballi-Dharwad/Infrastructure/Government/node=627687

5. ಹಿಜಾಬ್ ಕಿರಿಕ್ ಇಲ್ಲದೆ ಪರೀಕ್ಷೆ ಸಕ್ಸಸ್

ಧಾರವಾಡ ಜಿಲ್ಲೆಯಲ್ಲಿ ಶೇ.99 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಾಜರು. ಹಿಜಾಬ್ ಕುರಿತು ಎಲ್ಲಿಯೂ ಸಮಸ್ಯೆ ಉಂಟಾಗಿಲ್ಲ, ಶಾಂತಿಯುತ ಪರೀಕ್ಷೆ ನಡೆದಿರುವುದಾಗಿ ಸ್ಪಷ್ಟನೆ ಕೊಟ್ಟ ಡಿಸಿ.

https://publicnext.com/article/nid/Hubballi-Dharwad/Education/node=627612

6. ಮೊದಲ ಪರೀಕ್ಷೆ ಬರೆದ ಮಕ್ಕಳು

ಕುಂದಗೋಳ ತಾಲೂಕಿನಲ್ಲಿಯೂ ಎಸ್ಎಸ್ಎಲ್ಸಿ ಪರೀಕ್ಷೆ ಸುಗಮ. ಮೊದಲ ಪರೀಕ್ಷೆ ಬರೆದ ಮಕ್ಕಳ ಮುಖದಲ್ಲಿ ಮಂದಹಾಸ.

https://publicnext.com/article/nid/Hubballi-Dharwad/Education/node=627668

7. ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಮನೆಗೆ ವಾಪಸ್

ಹಿಜಾಬ್ ಧರಿಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರು ಮನೆಗೆ ವಾಪಸ್. ಸಮವಸ್ತ್ರ ಧರಿಸಿ ಮರಳಿ ಬಂದು ಪರೀಕ್ಷೆ ಬರೆದು ಸಕ್ಸಸ್. ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಶಾಂತಿನಿಕೇತನ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ.

https://publicnext.com/article/nid/Hubballi-Dharwad/Education/Government/node=627552

8. ದೇಶಿ ಚಾಯ್ ವಾಲಾ ಉದ್ಘಾಟನೆ

ಹುಬ್ಬಳ್ಳಿ ಮಂದಿಗೆ ಗುಣಮಟ್ಟದ ಚಹಾ ಕುಡಿಸಲು ದಾಜೀಬಾನ್ ಪೇಟೆಯ ಫೋಟೋ ಮೋಟೋ ಎದುರಿಗೆ ದೇಶಿ ಚಾಯ್ ವಾಲಾ ಮಳಿಗೆ. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಜಿ ಸೇರಿದಂತೆ ಕಾಂಗ್ರೆಸ್ ಮುಖಂಡರಿಂದ ಮಳಿಗೆ ಉದ್ಘಾಟನೆ.

https://publicnext.com/article/nid/Hubballi-Dharwad/Business/node=627601

9. ರಸ್ತೆ ತಡೆದು ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು.

https://publicnext.com/article/nid/Hubballi-Dharwad/Infrastructure/node=627569

10. ರಸ್ತೆ ಪಕ್ಕದಲ್ಲೇ ಕಸ ವಿಲೇವಾರಿ

ಸ್ವಚ್ಚತೆಗೆ ಬಗ್ಗೆ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿಯಿಂದಲೇ ರಸ್ತೆ ಪಕ್ಕದಲ್ಲಿಯೇ ಕಸ ಸುರಿಯುವ ಕಾರ್ಯ.

ಮನೆ ಮನೆಯಿಂದ ಸಂಗ್ರಹಿಸಿದ ಕಸವನ್ನು ರಸ್ತೆ ಬದಿಗೆ ಸುರಿಯುತ್ತಿರುವ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಜನರ ಆಕ್ರೋಶ.

https://publicnext.com/article/nid/Hubballi-Dharwad/Infrastructure/Government/node=627763

Edited By : Manjunath H D
Kshetra Samachara

Kshetra Samachara

28/03/2022 09:23 pm

Cinque Terre

34.94 K

Cinque Terre

1