ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

TOP 10 ನ್ಯೂಸ್ ಆಫ್ ಧಾರವಾಡ ಜಿಲ್ಲೆ: 23-Mar-2022

1. ಚೆನ್ನಮ್ಮ ಸರ್ಕಲ್‌ನಲ್ಲಿ ಮಗು ಜನನ

ಹೆರಿಗಾಗಿ ಮಹಿಳೆಯನ್ನು ಹಳ್ಯಾಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗಮಧ್ಯೆ ಹೊಟ್ಟೆ ನೋವು ಜಾಸ್ತಿ ಆಗಿದ್ದರಿಂದ ಮಹಿಳೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

https://publicnext.com/article/nid/Hubballi-Dharwad/News/Public-News/node=623910

2. ನಗರದಲ್ಲಿ ಜೆಸಿಬಿ ಸದ್ದು

ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಜೆಸಿಬಿಗಳು ಮತ್ತೆ ಸದ್ದು ಮಾಡಿವೆ. ಮಹಾನಗರ ಪಾಲಿಕೆ ಜಾಗ ಅತಿಕ್ರಮಿಸಿ ಅಂಗಡಿ ಹಾಕಿಕೊಂಡವರಿಗೆ ಪಾಲಿಕೆ ಅಧಿಕಾರಿಗಳು ಬುಧವಾರ ಬಿಸಿ ಮುಟ್ಟಿಸಿದ್ದಾರೆ.

https://publicnext.com/article/nid/Hubballi-Dharwad/Law-and-Order/node=623888

3. ನೌಕರಿ ಕೊಡಿಸುವುದಾಗಿ ವಂಚನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿಯ ರಾಘವೇಂದ್ರ ಕಟ್ಟಿ ಹಾಗೂ ಆತನ ಏಜೆಂಟ್ ಶರಣಪ್ಪ ತಿಕೋಟಿಕರ್ ವಂಚನೆ ಮಾಡಿದ್ದಾರೆ ಎಂದು ಜನಜಾಗೃತಿ ಸಂಘ ಆರೋಪಿಸಿದೆ. ಈ ಸಂಬಂಧ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

https://publicnext.com/article/nid/Hubballi-Dharwad/Politics/node=623990

4. ಬೈಕ್ ಸವಾರರ ಸಾವು.!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸಿ ಅಂತ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

https://publicnext.com/article/nid/Hubballi-Dharwad/Law-and-Order/Accident/node=623966

5. PSI ನೇಮಕಾತಿಯಲ್ಲಿ ಅಕ್ರಮ

2021ರಲ್ಲಿ ನಡೆಸಲಾದ 545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಧಾರವಾಡದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.

https://publicnext.com/article/nid/Hubballi-Dharwad/Politics/node=624203

6. ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ

ಧಾರವಾಡ ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ರಾಜೇಶ್ ಕಾಟನ್ ಜಿನ್ನಿಂಗ್‌ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿಕಾಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

https://publicnext.com/article/nid/Hubballi-Dharwad/Accident/node=623791

7. ಶಿವಳ್ಳಿ ಪುಣ್ಯಸ್ಮರಣೆ

ಮಾಜಿ ಸಚಿವ, ದಿವಂಗತ ಸಿ.ಎಸ್.ಶಿವಳ್ಳಿ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ನೆರವೇರಿತು. ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

https://publicnext.com/article/nid/Hubballi-Dharwad/Politics/Cultural-Activity/Human-Stories/node=624195

8. ಹುತಾತ್ಮರ ದಿವಸ

ದೇಶಪಾಂಡೆ ಪೌಂಡೇಶನ್ ವಿದ್ಯಾರ್ಥಿಗಳು ಭಗತ್ ಸಿಂಗ್ ಅವರ ಬಲಿದಾನ ದಿನಾಚರಣೆ ಅಂಗವಾಗಿ ದೇಶಭಕ್ತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಚೆನ್ನಮ್ಮ ಸರ್ಕಲ್, ಜನತಾ ಬಜಾರ್, ಭಗತ್‌ಸಿಂಗ್ ಸರ್ಕಲ್ ಸೇರಿದಂತೆ ಹಲವೆಡೆ ಕ್ಯಾಂಡಲ್ ಹಚ್ಚಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

https://publicnext.com/article/nid/Hubballi-Dharwad/Infrastructure/node=624179

Edited By : Nagesh Gaonkar
Kshetra Samachara

Kshetra Samachara

23/03/2022 10:01 pm

Cinque Terre

38.4 K

Cinque Terre

1

ಸಂಬಂಧಿತ ಸುದ್ದಿ