ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

TOP 10 ನ್ಯೂಸ್ ಆಫ್ ಧಾರವಾಡ ಜಿಲ್ಲೆ: 22-Mar-2022

1. 'ದೇಶದಲ್ಲಿ ನೂರಾರು ಕಾಶ್ಮೀರ್‌ಗಳಿವೆ'

ದೇಶದಲ್ಲಿ ಒಂದೇ ಕಾಶ್ಮೀರ್ ಇಲ್ಲ. ಅಂತಹ ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಹಿಂದೂಗಳು ಜಾಗೃತಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಹೇಳಿದ್ದಾರೆ.

https://publicnext.com/article/nid/Hubballi-Dharwad/Politics/Cinema/Religion/node=622921

2. ಸೌಹಾರ್ದತೆ ಹೋಳಿ ಆಚರಣೆ

ಹುಬ್ಬಳ್ಳಿಯ ಕಮರಿಪೇಟೆಯ ಕಾಮಣ್ಣನ ಆಚರಣೆಗೆ ತನ್ನದೆಯಾದ ಮಹತ್ವ ಇದೆ. ಇಲ್ಲಿನ ಕಾಮಣ್ಣನ ದರ್ಶನ ಪಡೆದುಕೊಳ್ಳಲು ನಾಡಿನ ವಿವಿಧಕಡೆಯಿಂದಲೂ ಭಕ್ತರು ಬರುತ್ತಾರೆ. ಮಕ್ಕಳು, ಮಹಿಳೆಯರು, ಹಿರಿಯರು, ಯುವಕರು ಎಲ್ಲರೂ ಒಟ್ಟಾಗಿ ಪಾಲ್ಗೊಂಡು ಹೋಳಿ ಹಬ್ಬಕ್ಕೆ ಹೊಸ ಮೆರಗು ನೀಡಿದ್ದಾರೆ.

https://publicnext.com/article/nid/Hubballi-Dharwad/Entertainment/Religion/node=623365

3. ಹಣ ಎಗರಿಸಿದ ಕಳ್ಳ ಪರಾರಿ

ಧಾರವಾಡದ ಟಿಕಾರೆ ರಸ್ತೆಯಲ್ಲಿನ ನವಭಾರತ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಯುವಕ ಆಕಡೆ, ಈಕಡೆ ನೋಡಿ ಯಾರೂ ಇಲ್ಲದನ್ನು ಗಮನಿಸಿ ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಹಣ ಎಗರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

https://publicnext.com/article/nid/Hubballi-Dharwad/News/Public-News/node=623312

4. ಹಾವು ರಕ್ಷಣೆ

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪೊಲೀಸ್ ಕ್ವಾಟರ್ಸ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಅದನ್ನು ಸ್ನೇಕ್ ನಾಗರಾಜ್‌ ರಕ್ಷಿಸಿ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಟ್ಟಿದ್ದಾರೆ.

https://publicnext.com/article/nid/Hubballi-Dharwad/Nature/node=623092

5. ಬಣ್ಣದಲ್ಲಿ ಬಾಂಧವ್ಯ

ರಂಗಪಂಚಮಿ ಆಚರಣೆಯಲ್ಲಿಯೂ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಯುವಕ, ಯುವತಿಯರು ಪುನೀತ್‌ ಅವರ ಚಿತ್ರದ ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿ ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

https://publicnext.com/article/nid/Hubballi-Dharwad/Entertainment/Religion/node=623313

6. ಮಾತು ತಪ್ಪಿದ ಅಧಿಕಾರಿಗಳು

ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಕಾಮಗಾರಿಯು ಮಾರ್ಚ್ 16ಕ್ಕೆ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದರು.ಆದರೆ ಇಂದಿಗೂ ಕಾಮಗಾರಿ ಅದೇ ಹಂತದಲ್ಲಿದ್ದು, ಬೈಕ್ ಸವಾರರು ಹಾಗೂ ವಾಹನ ಚಾಲಕರು ಪರದಾಡುವಂತಾಗಿದೆ.

https://publicnext.com/article/nid/Hubballi-Dharwad/Infrastructure/node=623085

7. ಚಿರತೆ ಅಲ್ಲಾ, ಕತ್ತೆ ಕಿರುಬ

ನವಲಗುಂದ ತಾಲೂಕಿನ ಬ್ಯಾಲ್ಯಾಳ ಸಮೀಪದ ಮಾರೋಹಳ್ಳದ ಬಳಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾಗಿತ್ತು. ಆದರೆ ಈಗ ಅದೇ ಪ್ರದೇಶದ ಹಾರ್ನಹಳ್ಳದ ಬಳಿ ಕತ್ತೆ ಕಿರುಬ ಕಂಡು ಬಂದಿದ್ದು, ಅಂದು ಕಂಡ ಚಿರತೆಯಂತಹ ಪ್ರಾಣಿ ಕತ್ತೆ ಕಿರುಬ ಎಂದು ಶಂಕಿಸಲಾಗಿದೆ.

https://publicnext.com/article/nid/Hubballi-Dharwad/Nature/node=622917

8. ಧಾರವಾಡ ಜಿಲ್ಲಾ ಆಸ್ಪತ್ರೆ ರಸ್ತೆಯನ್ನು ಅಗಲೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ಥಿಂಕರ್ಸ್ ಫೋರಮ್ ಅಧ್ಯಕ್ಷ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

https://publicnext.com/article/nid/Hubballi-Dharwad/Politics/node=623225

Edited By : Nagesh Gaonkar
Kshetra Samachara

Kshetra Samachara

22/03/2022 10:02 pm

Cinque Terre

59.12 K

Cinque Terre

0

ಸಂಬಂಧಿತ ಸುದ್ದಿ