1.ನಾಲ್ಕು ತಿಂಗಳಲ್ಲಿ 14 ರೈತರ ಆತ್ಮಹತ್ಯೆ
ಕಳೆದ ನಾಲ್ಕು ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 14 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತಿವೃಷ್ಟಿ, ಸಕಾಲಕ್ಕೆ ಬೆಂಬಲ ಬೆಲೆ ಸಿಗದಿರುವುದು ಇದಕ್ಕೆ ಕಾರಣವಾಗಿದೆ. ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವ ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ಹಾಗೂ ಬೆಳಗೆ ಯೋಗ್ಯ ಬೆಲೆ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ
https://publicnext.com/article/nid/Hubballi-Dharwad/Crime/Agriculture/node=613487
2.ಪ್ಲೀಸ್ ನೀರು ಕೊಡಿ ಸರ್...
ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ 50 ಕುಟುಂಬಗಳು ಮನೆಮನೆಗೆ ಗಂಗೆ ಯೋಜನೆಯಿಂದ ಸೌಲಭ್ಯ ವಂಚಿತವಾಗಿವೆ. ಅಧಿಕಾರಿಗಳು ಗೊತ್ತಿದ್ದೂ ಈ ರೀತಿ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮೂಲಭೂತ ಹಕ್ಕಾಗಿರುವ ನೀರಿನ ಸೌಕರ್ಯವನ್ನು ನಮಗೆ ಒದಗಿಸಬೇಕೆಂದು 50 ಕುಟುಂಬಗಳ ಸದಸ್ಯರು ಒತ್ತಾಯಿಸಿದ್ದಾರೆ.
https://publicnext.com/article/nid/Hubballi-Dharwad/Infrastructure/node=613213
3.ತ್ಯಾಜ್ಯ ನಿರ್ವಹಣೆಯಲ್ಲಿ ಕೋಟಿ ಹಗರಣ?
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೋಟ್ಯಾಂತರ ರೂ. ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಸ ವಿಂಗಡಣೆ ಮಾಡದೇ ಏಕಾಏಕಿ ಬೆಂಕಿ ಹಚ್ಚುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಸ ಸಂಗ್ರಹ ಸ್ಥಳದಲ್ಲಿನ ಸ್ಥಗಿತಗೊಂಡಿರುವ ತ್ಯಾಜ್ಯ ನಿರ್ವಹಣಾ ಘಟಕವನ್ನು ಕೂಡಲೇ ಆರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ..
https://publicnext.com/article/nid/Hubballi-Dharwad/Politics/Infrastructure/node=613251
4.ರಿವರ್ಸ್ ಟ್ರ್ಯಾಕ್ಟರ್ ಓಡಿಸಿದ ಅನ್ನದಾತರು
ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದಲ್ಲಿ ಇಂದು ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಜಿಲ್ಲೆಯ ಹಲವು ತಾಲೂಕುಗಳಿಂದ ಬಂದಿದ್ದ ರೈತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುತ್ತಲಿನ ಊರುಗಳ ಜನತೆ ಸ್ಪರ್ಧೆ ವೀಕ್ಷಿಸಿ ಸಂಭ್ರಮಿಸಿದರು.
https://publicnext.com/article/nid/Hubballi-Dharwad/Sports/node=613448
5.ಮರಳಿ ಬಂದ ಮಗ
ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದ ಧಾರವಾಡದ ಮಿಲನ್ ದೇವಮಾನೆ ನಿನ್ನೆ ಸಂಜೆ ಸುರಕ್ಷಿತವಾಗಿ ಧಾರವಾಡಕ್ಕೆ ಬಂದು ತಲುಪಿದ್ದಾರೆ. ಪುತ್ರನನ್ನು ಕಂಡ ಪೋಷಕರ ಕಣ್ಣಲ್ಲಿ ಆನಂದ ಬಾಷ್ಪ ತುಂಬಿ ಬಂದಿತ್ತು. ಉಕ್ರೇನ್‌ನಲ್ಲಿ ತಮಗಾದ ಭಯಾನಕ ಅನುಭವವನ್ನು ಮಿಲನ್ ಅವರು ತಮ್ಮ ನೆರೆಹೊರೆಯವರೊಂದಿಗೆ ಹಂಚಿಕೊಂಡಿದ್ದಾರೆ.
6.ಸಿದ್ಧಾರೂಢರ ಜಾತ್ರೆಯಲ್ಲಿ ಹಾಲು ಕರೆಯುವ ಸ್ಪರ್ಧೆ
ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರೆಯಲ್ಲಿ ಹಾಲು ಕರೆಯುವ ಸ್ಪರ್ಧೆ ಭಕ್ತರ ಕಣ್ಮನ ಸೆಳೆದಿದೆ. ಈ ಮೂಲಕ ಕೃಷಿ ಹಾಗೂ ಹಾಲು ಉತ್ಪಾದನೆ ಚಟುವಟಿಕೆಗೆ ಉತ್ತೇಜನ ಸಿಕ್ಕಂತಾಗಿದೆ. ಪಶು ವೈದ್ಯಕೀಯ ಇಲಾಖೆಯಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
https://publicnext.com/article/nid/Hubballi-Dharwad/Agriculture/Religion/node=613534
7.ಹುಬ್ಬಳ್ಳಿಯಲ್ಲಿ ಭಿಕ್ಷುಕನ ಬಳಿ ಕಂತೆ ಕಂತೆ ನೋಟು
ಅನಾರೋಗ್ಯದಿಂದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಿಕ್ಷುಕನ ಬಳಿ ಕಂತೆ ಕಂತೆ ಹಣ ದೊರೆತಿದೆ. ಹಣ ಕಂಡ ಸಿಬ್ಬಂದಿ ಅದನ್ನು ವಾಪಸ್ ಭಿಕ್ಷುಕನಿಗೆ ನೀಡಿದ್ದಾರೆ. ಈತ ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಸ್ಥಾನದ ಎದುರು ಭಿಕ್ಷೆ ಬೇಡುತ್ತಿದ್ದ ಎಂಬ ಮಾಹಿತಿ ಇದೆ.
https://publicnext.com/article/nid/Hubballi-Dharwad/Human-Stories/node=612995
8.ಜಗಳ ಬಿಡಿಸಲು ಹೋಗಿ ಮಸಣ ಸೇರಿದ
ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ಗಲಾಟೆ ತಳ್ಳಾಟದಲ್ಲಿ ಗೇಟ್ ತಾಗಿ ಮೃತಪಟ್ಟಿದ್ದಾನೆ. ಈ ಘಟನೆ ಧಾರವಾಡದ ಪೆಂಡಾರ್ ಗಲ್ಲಿಯಲ್ಲಿ ನಡೆದಿದೆ. ಊಟದ ವಿಚಾರವಾಗಿ ಜಗಳ ಆರಂಭವಾಗಿದೆ. ಸಾದಿಕ್ ಬಿಡ್ನಾಳ ಎಂಬಾತ ಘಟನೆಯಲ್ಲಿ ಪ್ರಾಣ ಬಿಟ್ಟಿದ್ದಾನೆ.
https://publicnext.com/article/nid/Hubballi-Dharwad/Crime/node=613309
9.ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಅವಳಿನಗರದಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕೆ.ಜಿ ಕಲ್ಲಂಗಡಿಗೆ 30ರಿಂದ 40 ರೂಪಾಯಿ ಇದ್ದು ಹುಬ್ಬಳ್ಳಿಯಲ್ಲಿ ವ್ಯಾಪಾರಸ್ಥರ ವಹಿವಾಟು ಜೋರಾಗಿ ನಡೆದಿದೆ.
https://publicnext.com/article/nid/Hubballi-Dharwad/Nature/News/Public-News/node=613324
10. ನಿವೇಶನ ಹಂಚಿಕೆಯಲ್ಲಿ ಅಕ್ರಮದ ಆರೋಪ ಅಣ್ಣಿಗೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
https://publicnext.com/article/nid/Hubballi-Dharwad/Politics/Crime/node=613380
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/03/2022 09:56 pm