ನವಲಗುಂದ: ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ವೀರ ಯೋಧ ನಿವೃತ್ತಿ ಹೊಂದಿ ತಮ್ಮ ಸ್ವಗ್ರಾಮಕ್ಕೆ ಮರಳಿದ ವೇಳೆ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸನ್ಮಾನ ಮಾಡಿ, ಬರಮಾಡಿಕೊಂಡು ಸಂಭ್ರಮದಿಂದ ಮೆರವಣಿಗೆ ಮಾಡಿದರು.
ವೀರ ಯೋಧ ಚನ್ನಬಸನಗೌಡ ಮಲ್ಲಿಕಾರ್ಜುನಗೌಡ ಗಂಗನಗೌಡ್ರ ಅವರು ಭಾರತೀಯ ಸೇನೆಯಲ್ಲಿ ಕಳೆದ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಮ್ಮ ಸ್ವಗ್ರಾಮಕ್ಕೆ ಮರಳಿದ ವೇಳೆ ಗ್ರಾಮದಲ್ಲಿ ಜಾತ್ರೆಯ ಸಡಗರ ಸೃಷ್ಟಿಯಾಗಿತ್ತು. ನಿವೃತ್ತ ವೀರ ಯೋಧನನ್ನು ಬೃಹತ್ ಮೆರವಣಿಗೆ ಮೂಲಕ ಹಲವು ವಾಧ್ಯಗಳೊಂದಿಗೆ ಆತನ ದೇಶ ಸೇವೆಗೆ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದರು.
Kshetra Samachara
01/10/2022 08:33 pm