ಹುಬ್ಬಳ್ಳಿ: ಸಾಹಸ ಸಿಂಹ, ಕನ್ನಡದ ಕಣ್ಮಣಿ ಡಾ.ವಿಷ್ಣುವರ್ಧನ್ ಅವರ 72ನೇ ಹುಟ್ಟು ಹಬ್ಬವನ್ನು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ, ರಾಯಣ್ಣನ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಆದರ್ಶ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ದೈಹಿಕವಾಗಿ ಅವರು ನಮ್ಮ ನಡುವೆ ಇಲ್ಲದಿದ್ದರೂ ಕೂಡ, ವಿಷ್ಣುವರ್ಧನ್ ಅವರ ಆದರ್ಶಗಳ ಮುಖಾಂತರ ಹಾಗೂ ಅವರು ನಟಿಸಿದ ಚಲನಚಿತ್ರಗಳ ಮುಖಾಂತರ ಅವರು ಎಂದೆಂದಿಗೂ ಅಜರಾಮರವಾಗಿದ್ದಾರೆ. ಇಂತಹ ಅಪ್ರತಿಮ ನಟ ಮತ್ತೆ ಕರುನಾಡಲ್ಲಿ ಹುಟ್ಟಿ ಬರಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ, ವಿಷ್ಣು ದಾದಾ ಅವರ ಜಯಂತಿಯ ಅಂದು ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸೋಣ ಎಂದು ಹಿತನುಡಿದರು.
ಈ ಸಂದರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಧಾರವಾಡ ಜಿಲ್ಲಾ ಗೌರವಾಧ್ಯಕ್ಷರಾದ ಚಂದ್ರು ಹೋನ್ನಣ್ಣನವರ ಅವರಿಗೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯುವ ಮುಖಂಡರು ಸಮಾಜಸೇವಕರಾದ ಕಿರಣ್ ಉಪ್ಪಾರ, ಮತ್ತು ಇನ್ನೊಬ್ಬ ಯುವ ಮುಖಂಡರಾದ ವೀರೇಶ್ ಗೋಂದಿ ಆಗಮಿಸಿದ್ದರು. ಅಭಿಮಾನಿ ಬಳಗದ ದೀಪಕ್ ಕಲಾಲ್, ಅಶೋಕ್ ಹಾದಿಮನಿ, ಗಣೇಶ್ ಅಂಬಿಗೇರ, ಸಂತೋಷ್ ಬಾಯಗೋಳ, ಎಲ್ಲಪ್ಪ ಅಂಬಿಗೇರ್,ನವೀನ ಅತ್ತಿಬೆಳಗಲ್, ವೀರೇಶ್ ಗೋಕಾಕ್ ಇನ್ನು ಹಲವಾರು ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದು ವಿಷ್ಣು ದಾದಾ ಅವರ ಜಯಂತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
20/09/2022 10:26 pm