ಹುಬ್ಬಳ್ಳಿ: ಪೊಲೀಸರೆಂದರೆ ತಾವಾಯಿತು ತಮ್ಮ ಕರ್ತವ್ಯ ಆಯಿತು ಎಂದು ಇರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ದೊಡ್ಡಾಟ ಮಾಡಿ, ಕೆಲಸದ ಜೊತೆಗೆ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೂ ಸೈ ಎಂಬುದನ್ನು ಸಾಬೀತು ಮಾಡಿದ್ದಾರೆ.
ಹೌದು, ಹೀಗೆ ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸಿರುವ ಇವರು ಜೆ.ಎಮ್.ಕಾಲಿಮಿರ್ಚಿ ಅಂತಾ ಹುಬ್ಬಳ್ಳಿಯ ಗೋಕುಲ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ಸ್ ಪೆಕ್ಟರ್ ಜೆ.ಎಮ್.ಕಾಲಿಮಿರ್ಚಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಜಾನಪದ ಕಲಾ ಬಳಗ ಟ್ರಸ್ಟ್ ನಿಂದ ರವಿವಾರ ನಡೆದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ವೃಷಸೇನ ಪಾತ್ರದ ವೇಷ ಧರಿಸಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
12/09/2022 08:35 am