ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ತೆರೆ ಬಿದ್ದಿದ್ದು, ಬೃಹತ್ ಮೆರವಣಿಗೆ ಮೂಲಕ ಜನರು ಗಣಪತಿಗೆ ವಿದಾಯ ಹೇಳಿದ್ದಾರೆ.
ಹೌದು.. ನಗರದ ದುರ್ಗದಬೈಲ್, ದಾಜೀಬಾನ್ ಪೇಟ್ , ಮರಾಠಾ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣೇಶ ವಿಸರ್ಜನೆ ನಡೆಸಿದ್ದು, ವಿಸರ್ಜನೆ ಅಂಗವಾಗಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕರ ಸಂಭ್ರಮ ಮುಗಿಲು ಮುಟ್ಟಿದೆ.
ಗಣೇಶ ವಿಸರ್ಜನೆಗಾಗಿ ಸೇರಿದ ಸಾವಿರಾರು ಸಂಖ್ಯೆಯ ಯುವ ಸಮೂಹ ರಸ್ತೆಯುದ್ದಕ್ಕೂ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುವ ಮೂಲಕ ಗಮನ ಸೆಳೆದರು. ಒಂದೆಡೆ ಡಿಜೆ ಮತ್ತೊಂದೆಡೆ, ವಿವಿಧ ವಾದ್ಯಗಳ ಮೂಲಕ ಗಣೇಶ ವಿಸರ್ಜನೆ. ಡೊಳ್ಳು ಕುಣಿತ, ಹಜ್ಜೆಮಜಲು ಡೋಲು ಸೇರಿದಂತೆ ವಿವಿಧ ವಾದ್ಯಗಳ ಮೂಲಕ ಗಜಮುಖನ ವಿಸರ್ಜನೆ ನೆರವೇರಿತು.
ಇನ್ನೂ ಸಾರ್ವಜನಿಕರ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಿದ್ದು, ಹು-ಧಾ ಪೊಲೀಸ್ ಕಮಿಷನರೇಟ್ನಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಪೊಲೀಸ್ ಸರ್ಪಗಾವಲು ಮಾಡಲಾಗಿದೆ.
Kshetra Samachara
09/09/2022 10:57 pm