ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮರಗಳನ್ನು ವೀಕ್ಷಣೆ : ನಾಮಫಲಕ ಅನಾವರಣ ಮಾಡಿದ ವೃಕ್ಷ ಮಾತೆ

ಹುಬ್ಬಳ್ಳಿ : ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಅವರು, ಹುಬ್ಬಳ್ಳಿಯ ಪ್ರವಾಸದಲ್ಲಿ ಗೋಪನಕೊಪ್ಪ ಉಣಕಲ್ ಮುಖ್ಯ ರಸ್ತೆಯ ವಸುಂಧರಾ ಫೌಂಡೇಷನ್ ಹುಬ್ಬಳ್ಳಿ ಸಂಸ್ಥೆಯು, ಸಾಲುಮರದ ತಿಮ್ಮಕ್ಕ ಅವರ ಪ್ರೇರಣೆಯಿಂದ, ನಗರದ ಜೆ.ಕೆ ಸ್ಕೂಲ್ ಹತ್ತಿರ ಕಳೆದ ಆರು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ 150 ಸಾಲುಮರಗಳನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು ಜೊತೆಗೆ ನಾಮಫಲಕವನ್ನು ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಮೇಘರಾಜ ಕೆರೂರ, ಚನ್ನು ಹೊಸಮನಿ, ಶಿವಪ್ಪ ಬಾರ್ಕಿ, ಧರ್ಮರಾಜ ಅಬ್ಬಯ್ಯ, ಈರಪ್ಪ ಘಂಟಿ, ಸಂಸ್ಥೆಯ ಸದಸ್ಯರು ಜೆ ಕೆ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

30/08/2022 02:29 pm

Cinque Terre

10.93 K

Cinque Terre

0

ಸಂಬಂಧಿತ ಸುದ್ದಿ