ಕುಂದಗೋಳ: ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಆದರ್ಶ ಶಾಲೆಯಲ್ಲಿ ಸಂಭ್ರಮದಿಂದ ಕೃಷ್ಣ ಜನ್ಮಾಷ್ಠಮಿ ಹಬ್ಬ ಆಚರಿಸಲಾಯ್ತು.
ಹೌದು… ಕೃಷ್ಣ ರಾಧೆಯರ ವೇಷಭೂಷಣ ತೊಟ್ಟು ಮಕ್ಕಳ ಕಲರವದ ನಡುವೆ ಶಾಲೆ ಸಿಬ್ಬಂದಿ ಹಾಗೂ ಪಾಲಕರು ಅಕ್ಷರಶಃ ಕಳೆದೇ ಹೋಗಿದ್ದರು. ಇನ್ನೂ ಈ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಾ ಬರುವ ನೋಟಗಳು ಮತ್ತಷ್ಟೂ ಮೆರುಗು ತಂದವು.
ಒಟ್ಟಾರೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ ರಾಧೆಯರ ವೇಷ ತೊಟ್ಟು ಸಂಭ್ರಮಿಸಿದ್ರು. ಬಾಲ ಕೃಷ್ಣನ ವೇಷಗಳಂತೂ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾದವು. ಆದರ್ಶ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಏರ್ಪಡಿಸಿದ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಅಷ್ಟೇ ಉತ್ಸಾಹ ತೋರಿ ಭಾಗಿಯಾದರು.
Kshetra Samachara
19/08/2022 06:28 pm