ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಂಬಯ್ಯ ಹಿರೇಮಠಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಕುಂದಗೋಳ: ತಾಲೂಕಿನ ಹರ್ಲಾಪೂರ ಗ್ರಾಮದ ಸಾಂಬಯ್ಯ ಸಂಗಯ್ಯ ಹಿರೇಮಠ ಅವರಿಗೆ ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ಅಧ್ಯಕ್ಷ ಮಂಜಮ್ಮ ಜೋಗತಿ ಅವರು, ಅವರ 30 ವರ್ಷದ ಜಾನಪದ ಸೇವೆಯನ್ನು ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಕೊಡಮಾಡುವ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗವುದೆಂದು ತಿಳಿಸಿದ್ದಾರೆ.

ಸಾಂಬಯ್ಯ ಅವರು ಎಂಎ ಕನ್ನಡ, ಎಂಎ ಪತ್ರಿಕೋಧ್ಯಮ ಮುಗಿಸಿಕೊಂಡು ಕಾಯಕದಲ್ಲಿ ತೊಡಗಿಕೊಂಡು ಗ್ರಾಮದಲ್ಲಿ ಜಾನಪದ ತರಬೇತಿ, ಸೇರಿದಂತೆ ಅನೇಕ ಜಾನಪದ ಪ್ರಕಾರಗಳನ್ನು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಈಗಾಗಲೇ ಕರ್ನಾಟಕದಾದ್ಯಂತ ಸಾವಿರಾರು ಜಾನಪದ ಕಾರ್ಯಕ್ರಮ ನೀಡಿದ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವೇದಿಕೆಯಿಂದ ಹಿಡಿದು ರಾಜ್ಯ ರಾಷ್ಟ್ರ ಮಟ್ಟದ ವೇದಿಕೆ ಪ್ರತಿನಿಧಿಸಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Edited By : PublicNext Desk
Kshetra Samachara

Kshetra Samachara

19/08/2022 12:35 pm

Cinque Terre

5.06 K

Cinque Terre

0

ಸಂಬಂಧಿತ ಸುದ್ದಿ