ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಯುವ ಮೋರ್ಚಾದಿಂದ 'ರಾಷ್ಟ್ರ ಧ್ವಜದ ಜಾಗೃತಿ' ಮೂಡಿಸಿದ ಹಾಡು ವೈರಲ್

ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ಹರ್ ಘರ್ ತಿರಂಗಾ' ಅಭಿಯಾನದ ಕುರಿತು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ -73 ಯುವ ಮೋರ್ಚಾ ಪದಾಧಿಕಾರಿಗಳು ಧ್ವಜ ಜಾಗೃ ಗೀತೆಯೊಂದನ್ನು ರಚಿಸಿದ್ದಾರೆ.

ಹೌದು. ಅವಿನಾಶ್ ಹರಿವಣ, ಆಕಾಶ್ ನರವಟೆ ಮತ್ತು ಇನ್ನಿತರ ಪದಾಧಿಕಾರಿಗಳು ಈ ದೇಶ ಭಕ್ತಿ ಗೀತೆಯನ್ನು ರಚಿಸಿದ್ದಾರೆ. ಈ ಗೀತೆಯನ್ನು ಆ.14 ರಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೆ ಎಸ್ ಡಿಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾಹುಕಾರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ, ವಿರೂಪಾಕ್ಷರ ಎನ್ ಗೌಡ,ಈಶ್ವರ್ ಗೌಡ ಪಾಟೀಲ್, ಸೆಂಟ್ರಲ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಹರಿವಾಣ, ಯುವಮೋರ್ಚಾ ಪದಾಧಿಕಾರಿಗಳಾದ ಅನಿಲ್ ಇಚಾರದ,ದೀಪಕ್ ಮಾನೆ, ರಜತ್ ಹಜಾರೆ,ನಿವಾಸ ರಂಗ್ರೆಜ್, ಮಂಜುನಾಥ್ ಕಳ್ಳಿಮನಿ ಹಾಗೂ ಸೆಂಟ್ರಲ್ ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/08/2022 04:18 pm

Cinque Terre

60.14 K

Cinque Terre

1

ಸಂಬಂಧಿತ ಸುದ್ದಿ