ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇರುವ ಎಲ್ಲಾ ಪೊಲೀಸ್ ಠಾಣೆಗಳು ಸೇರಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಇಂದು ಸಂಭ್ರಮದ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ರವಿಚಂದ್ರ ಬಡಪಕ್ಕಿರಪ್ಪನವರ ಧ್ವಜಾರೋಹಣ ನೆರವೇರಿಸಿದರು. ಅವರಿಗೆ ಸಿಬ್ಬಂದಿ ಸಾಥ್ ನೀಡಿದರು.

ಇನ್ನು ಧ್ವಜಾರೋಹಣ ನಂತರ ಸಿಬ್ಬಂದಿಯಾದ ಗ್ಯಾನಪ್ಪನವರ, ಬಸವರಾಜ ಅಂಗಡಿ ಸಂಗೀತ ಗೌಳಿ, ಪುಂಡಲೀಕ, ಪ್ರಕಾಶ್ ಕಲ್ಕುಡಿ ಸೇರಿ ಠಾಣೆಯಲ್ಲಿ ದೇಶ ಭಕ್ತಿಯ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮ ಪಟ್ಟರು, ನಂತರ ನಗರದ ವಿವಿಧೆಡೆ ನಡೆಯುತ್ತಿರುವ ಧ್ವಜಾರೋಹಣ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸಲು ತೆರಳಿದರು.

Edited By : Manjunath H D
Kshetra Samachara

Kshetra Samachara

15/08/2022 01:57 pm

Cinque Terre

20.63 K

Cinque Terre

5

ಸಂಬಂಧಿತ ಸುದ್ದಿ