ಕಲಘಟಗಿ: 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಸರ್ಕಾರ ಆದೇಶದ ಮೇರೆಗೆ ಹರ್ ಘರ್ ತಿರಂಗಾ ಇಂದು ಕಲಘಟಗಿ ಪಟ್ಟಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಅದೇ ರೀತಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಧ್ವಜಗಳನ್ನು ಹಿಡಿದು ಕಲಘಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಿದರು.
ಪ್ರತಿಯೊಂದು ಮನೆಯಲ್ಲಿಯೂ ಕೂಡ ಮನೆಯ ಮೇಲೆ ಕುಟುಂಬ ಸಮೇತರಾಗಿ ಧ್ವಜಗಳನ್ನು ಕಟ್ಟುತ್ತಿರುವ ದೃಶ್ಯ ಕಂಡುಬಂದಿತು. ಅಂಗಡಿ ಹಾಗೂ ಹೋಟೆಲ್ ಮಾಲೀಕರು ಕೂಡ ತಮ್ಮ ತಮ್ಮ ಅಂಗಡಿಗಳ ಮೇಲೆ ಧ್ವಜಗಳನ್ನು ಕಟ್ಟಿ ಸಂತೋಷಪಟ್ಟರು.
ವರದಿ: ಉದಯ ಗೌಡರ
Kshetra Samachara
13/08/2022 03:21 pm