ನವಲಗುಂದ: ಸಹೋದರ ಸಹೋದರಿಯರ ನಡುವಿನ ಬಾಂಧವ್ಯಕ್ಕೆ ಹೆಸರಾದ ಹಬ್ಬ ಅಂದ್ರೆ ಅದು ರಕ್ಷಾ ಬಂಧನ. ಈ ರಕ್ಷಾ ಬಂಧನ ಹಬ್ಬಕ್ಕೆ ತಂಗಿಯರು ತಮ್ಮ ಅಣ್ಣಾ ತಮ್ಮಂದಿರಿಗೆ ರಾಖಿ ಕಟ್ಟಿ, ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ. ಈ ಹಬ್ಬಕ್ಕೆ ರಾಖಿ ಮಾರಾಟ ಸಹ ಬಲು ಜೋರಾಗಿಯೇ ನಡೆಯುತ್ತಿದೆ.
ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ವೈದಿಕ ಕಾಲದಲ್ಲೂ ರಕ್ಷಾ ಬಂಧನ ಆಚರಣೆಯಲ್ಲಿತ್ತು ಎಂದು ಹೇಳಲಾಗುತ್ತದೆ. ಇದರ ಪ್ರಯುಕ್ತ ನವಲಗುಂದ ಪಟ್ಟಣದ ಮಾರುಕಟ್ಟೆಯಲ್ಲಿನ ಅಂಗಡಿಗಳಲ್ಲಿ ವಿವಿಧ ರಾಖಿಗಳು ರಾರಾಜಿಸುತ್ತಿವೆ.
ರಾಖಿ ಖರೀದಿಗೆ ಸಹೋದರಿಯರು ಅಂಗಡಿಗಳಿಗೆ ಮುಗಿಬಿದ್ದಿದ್ದರು. ಅಂಗಡಿಗಳಲ್ಲಿ ಹಲವು ವಿಧದ ರಾಖಿಗಳು ಮಾರಾಟಕ್ಕೆ ಇಡಲಾಗಿತ್ತು.
Kshetra Samachara
11/08/2022 08:47 pm