ಕುಂದಗೋಳ : 75ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿಯವರ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳು ಚಾಲನೆ ನೀಡಿದರು.
ಕುಂದಗೋಳ ಪಟ್ಟಣ ಪಂಚಾಯಿತಿ ವತಿಯಿಂದ ಈಗಾಗಲೇ ಕುಂದಗೋಳದ ಪ್ರತಿ ಮನೆ ಮೇಲೆ ಹಾರಿಸಲು 3500 ರಾಷ್ಟ್ರ ಧ್ವಜ ಖರೀದಿಸಿ ಅವುಗಳ ವಿತರಣೆ ಕಾರ್ಯಕ್ರಮ ಜರುಗಿತು.
ಕುಂದಗೋಳ ಪಟ್ಟಣದ 19 ವಾರ್ಡ್ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ತಲಾ ಒಂದು ಧ್ವಜಕ್ಕೆ 25 ರೂಪಾಯಿಯಂತೆ ಧ್ವಜ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿದ್ದು, ಪಟ್ಟಣದ 19 ವಾರ್ಡಗಳ ನಿವಾಸಿಗಳಿಗೆ ಪ್ರತಿ ಮನೆಗೊಂದು ಧ್ವಜ ವಿತರಣೆಗೆ ಮುಂದಾಗಿದ್ದಾರೆ.
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ ಉಪಾಧ್ಯಕ್ಷ ಹಣುಮಂತಪ್ಪ ರಣತೂರ ಮುಖ್ಯಾಧಿಕಾರಿ ನಾರಾಯಣ್ ಡೊಂಬರ್ ಆಗಸ್ಟ್ 13 ರಿಂದ 15ರ ವರೆಗೆ ತಮ್ಮ ಮನೆ ಮೇಲೆ ಧ್ವಜ ಹಾರಿಸಲು ತಿಳಿಸಿದರು.
Kshetra Samachara
11/08/2022 02:47 pm