ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 226 ನೇ ಜಯಂತ್ಯೋತ್ಸವ ಅಂಗವಾಗಿ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ವತಿಯಿಂದ ಇಂದಿನಿಂದ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಯೋಧರು ಹಾಗೂ ಸಮಾಜ ಸೇವಕರಾದ ಪರಶುರಾಮ ದವಾನದ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 8000 ಉಚಿತ ನೋಟ್ ಬುಕ್ ವಿತರಣೆ, 1000 ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸುವುದು, ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇನ್ನೂ ನಾಳೆ ನವಲಗುಂದ ತಾಲೂಕಿನ ನಲವಡಿ ಗ್ರಾಮದ ಜೂನಿಯರ್ ಕಾಲೇಜ್, ದಿ.13 ರಂದು ಇಂಗಳಹಳ್ಳಿ ಗ್ರಾಮ ಹೈಸ್ಕೂಲ್ ನಲ್ಲಿ, ದಿ. 14 ರಂದು ಸಾಯಂಕಾಲ ಅಣ್ಣಿಗೇರಿಯ ಶಾದಿಮಹಲನಲ್ಲಿ ಪ್ರತಿಭಾ ಪುರಸ್ಕಾರ, ದಿ.16 ರಂದು ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಜೂನಿಯರ್ ಕಾಲೇಜಿನಲ್ಲಿ ಉಚಿತವಾಗಿ ನೋಟ್ ಬುಕ್ ವಿತರಣೆ, ಪರಿಸರ ರಕ್ಷಣೆ ಹಾಗೂ ದ್ವಿಚಕ್ರ ನಡೆಸುವ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Kshetra Samachara
11/08/2022 02:16 pm