ನವಲಗುಂದ : ಕರ್ನಾಟಕ ಫಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ವತಿಯಿಂದ ನವಲಗುಂದದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 7 ರಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಮಂಡಳದ ಅದ್ಯಕ್ಷರಾದ ಡಾ.ಅಬ್ದುಲ್ ರಜಾಕ್ ನದಾಫ್ ಮಾತನಾಡಿ, ಪ್ರತಿ ವರ್ಷ ನಮ್ಮ ಸಂಘದಿಂದ ರಾಜ್ಯದ ವಿವಿದೆಡೆಯಲ್ಲಿ ಪತ್ರಿಕಾ ದಿನಾಚರಣೆ ಆಚರಿಸುತ್ತ ಬಂದಿರುತ್ತೆವೆ ಇದೆ ಮೊದಲ ಬಾರಿಗೆ ನಮ್ಮೂರಿನಲ್ಲಿ ಕಾರ್ಯಕ್ರಮ ನಡೆಸಲು ಖುಷಿ ಎನಿಸುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಸಂಘದ ಸದಸ್ಯರು ನೊಟ್ ಬುಕ್ಸ ಹಾಗೂ ಕುಡಿಯುವ ನೀರಿನ ಟಾಕೆ ಅನ್ನು ಶಾಲಾ ಸುಧಾರಣ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಾಲಾ ಸಿಬ್ಬಂದಿಗೆ ಹಸ್ತಾಂತರಿಸಿದರು.
ಈ ವೇಳೆ ಮಲ್ಲಿಕಾರ್ಜುನ ಪವಾಡಶೆಟ್ಟರ, ಎಮ್.ಎಚ್ ಬಚಿಕನಾಳ, ಮಹ್ಮದಲಿ ಜಿಗಳೂರ, ಜಯಪ್ರಕಾಶ ಬದಾಮಿ, ಎಸ್ .ಡಿ.ಎಮ್.ಸಿ ಅಧ್ಯಕ್ಷ ನೀಲಪ್ಪ ಹೊಸರಣ್ಣವರ, ರವಿರಾಜ ನಡುವಿನಮನಿ, ಕಿರಣಗೌಡ ತುಪ್ಪದಗೌಡ್ರ, ವೈ.ಎಮ್ ನದಾಫ್, ವೈ.ಎಲ್ ಸುಣಗಾರ, ಎಲ್ ಕೆ ಬಿಕನಳ್ಳಿ ಇದ್ದರು.
Kshetra Samachara
29/07/2022 05:32 pm